HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಮಂಗಳೂರಿನಲ್ಲಿ ಅಪಘಾತ: ಕುಕ್ಕಾವಿನ ಇರ್ಷಾದ್ ದಾರುಣ ಸಾವು

ಕಡಿರುದ್ಯಾವರ :ಮಂಗಳೂರಿನಲ್ಲಿ ನಿನ್ನೆ(ಸೆ.22) ನಡೆದ ಅಪಘಾದಲ್ಲಿ   ಕಡಿರುದ್ಯಾವರ ಗ್ರಾಮದ ಕುಕ್ಕಾವು ನಿವಾಸಿ ಇರ್ಷಾದ್ ಎರ್ಮಾಲ್ ಪಳ್ಕೆ(17.ವ)ದಾರುಣವಾಗಿ ಸಾವನ್ನಪ್ಪಿದ್ದಾರೆ.‌

ಇರ್ಷಾದ್ ರವರು ಕಡಿರುದ್ಯಾವರ ಗ್ರಾಮದ ಕುಕ್ಕಾವು ನಿವಾಸಿ ಅಬೂಬಕ್ಕರ್ ಮತ್ತು ಝೊಹರಾ ದಂಪತಿ ಪುತ್ರರಾಗಿದ್ದು, ಮಂಗಳೂರಿನಲ್ಲಿ ಹೊಟೇಲ್ ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು.
ಇವರು ಸಣ್ಣ ಪ್ರಾಯದಲ್ಲೇ ತನ್ನ ತಂದೆ ತಾಯಿಯನ್ನು ತೊರೆದು ಹೋಗಿದ್ದು, ತಾಯಿ ತನ್ನಿಬ್ಬರು ಮಕ್ಕಳನ್ನು ಸಾಕಿ ಸಲಹಿ, ಇದೀಗ ದುಡಿಯುವ ಪ್ರಾಯಕ್ಕೆ ಬಂದಿರುವ ಪುತ್ರನನ್ನು ಕಳೆದುಕೊಂಡು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಮೃತ ಶರೀರದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ‌  ನಡೆಸಲಾಗಿದ್ದು, ಇಂದು  ಪಾರ್ಥಿವ ಶರೀರದ  ಅಂತ್ಯಕ್ರಿಯೆಯು ಕಡಿರುದ್ಯಾವರದಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.