ಅಳದಂಗಡಿ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ ಪ್ರಾಥಮಿಕ ಕೃಷಿ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸೆ.22 ರಂದು ಸಂಘದ ಅಧ್ಯಕ್ಷ  ಶಿವ ಭಟ್ ರವರ ಅಧ್ಯಕ್ಷತೆಯಲ್ಲಿ  ‘ಅಳದಂಗಡಿ  ಸ್ವರಾಜ್ ಟವರ್ಸ್ ನ ಶ್ರೀ ಗುರು ಸಭಾಭವನ’ದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ  ಸಂಘದ ಸದಸ್ಯರ ಡಿವಿಡೆಂಟ್ ನಲ್ಲಿ 2%ಮೊತ್ತವನ್ನು ಮತ್ತು ಸಂಘದ ಸಿಬ್ಬಂದಿಗಳು ಒಂದು ದಿನದ ವೇತನವನ್ನು ಮತ್ತು ಅಧ್ಯಕ್ಷರು ಮತ್ತು ಅವರ ಮನೆಯವರು ಅವರ ಡಿವಿಡೆಂಟ್ ಮೊತ್ತವನ್ನು ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ ಶಾಸಕರ ಕಾಳಜಿ ರೀಲೀಫ್ ಫoಡ್ ಗೆ ನೀಡುವುದಾಗಿ ಘೋಷಿಸಲಾಯಿತು.  ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳಿಗೆ  ವಿದ್ಯಾರ್ಥಿವೇತನ ನೀಡಲಾಯಿತು.

ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ನಿರ್ದೇಶಕರುಗಳಾದ ಶಶಿಧರ್ ಶೆಟ್ಟಿ, ಧರ್ಣಪ್ಪ ಮಾಸ್ಟರ್, ಪ್ರಶಾಂತ್ ಶೆಟ್ಟಿ, ಬಾಲಕೃಷ್ಣ ಯೈಕುರಿ, ಗುರುಪ್ರಸಾದ್, ಧರ್ಣಪ್ಪ, ಕೆಂಪ, ಜಿನ್ನಪ್ಪ ಪೂಜಾರಿ, ಗುಲಾಬಿ ಎಂ ಎನ್, ಶ್ರೀಮತಿ ಸುಂದರಿ ಮತ್ತು ಮುಖ್ಯಕಾರ್ಯನಿರ್ವಣಾಧಿಕಾರಿ ಶ್ರೀಮತಿ ಮೀರಾ, ಹಾಗೂ ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.