ಬಾರ್ಯ ಸಹಕಾರ ಸಂಘಕ್ಕೆ ಸಾಧನಾ ಪ್ರಶಸ್ತಿ

ಬೆಳ್ತಂಗಡಿ: ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2018-19ನೇ ಸಾಲಿನಲ್ಲಿ ಶೇ 100 ಸಾಲ ವಸೂಲಾತಿ ಸಾಧಿಸಿದ್ದು, ಸಂಘದ ಪ್ರಗತಿ, ಉತ್ತಮ ಚಟುವಟಿಕೆಗೆ ಹಾಗೂ ಸಾಧನೆಯನ್ನು ಗುರುತಿಸಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸತತ 8ನೇ ಬಾರಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಿದೆ.
ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಮಹಾಸಭೆಯಲ್ಲಿ ಬಾರ್ಯ ಪ್ರಾ,ಕೃ,ಪ,ಸ,ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ ಕೆ ಆರ್ ರವರ ಉಪಸ್ಥಿತಿಯಲ್ಲಿ ಸಂಘದ ಉಪಾಧ್ಯಕ್ಷರಾದ ಸೇಸಪ್ಪ ಸಾಲಿಯಾನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸತೀಶ್ ಗೌಡ ಟಿ, ಅವರನ್ನು ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಜಿಲ್ಲಾ ಬ್ಯಾಂಕಿನ ಅಧ್ಯಕ್ಷರಾದ ಡಾ| ರಾಜೇಂದ್ರ ಕುಮಾರ್ ಅಭಿನಂದಿಸಿದರು. ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕರಾದ ನಿರಂಜನ್ ಕುಮಾರ್ ಬಾವಂತಬೆಟ್ಟು, ಸಂಘದ ನಿರ್ದೇಶಕರಾದ  ಪ್ರವೀಣ್ ರೈ ಪಿ, ಪಾಶ್ವನಾಥ ಜೈನ್, ಶಾಖಾ ವ್ಯವಸ್ಥಾಪಕ, ರಾಘವೇಂದ್ರ ಅಡಪ, ಹಾಗೂ  ಶಶಿಧರ ಅಡಪ, ವಲಯ ಮೇಲ್ವಿಚಾರಕರಾದ ಸಿರಾಜುದ್ದೀನ್, ಸಂಘದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.