ಧರ್ಮಸ್ಥಳ : ಗಾಂಜಾ ಆರೋಪಿ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಇಲ್ಲಿಯ ಗಂಗೋತ್ರಿ ವಸತಿ ಗೃಹದ ಬಳಿ ದ್ವಿಚಕ್ರ ವಾಹನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯೋರ್ವನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ ಘಟನೆ ಸೆ.20 ರಂದು ರಾತ್ರಿ ನಡೆದಿದೆ. ಉಳಾಯಿಬೆಟ್ಟು ಗ್ರಾಮದ ನಿವಾಸಿ ಪ್ರದೀಪ್ ಪೂಜಾರಿ(26 .ವ) ಬಂಧಿತ ಆರೋಪಿ.
ಘಟನೆಯ ವಿವರ: ಧರ್ಮಸ್ಥಳ ಗ್ರಾಮದ ಗಂಗೋತ್ರಿ ವಸತಿ ಗೃಹದ ಬಳಿ ಸೆ.20 ರಂದು ರಾತ್ರಿ 1.30 ಗಂಟೆಗೆ  KA-19- EX – 8570 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದೊಂದಿಗೆ ಪ್ರದೀಪ್ ಪೂಜಾರಿಯವರು ಅನುಮಾನಾಸ್ಪದವಾಗಿ ನಿಂತಿದ್ದನ್ನು ಗಮನಿಸಿದ ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕರು ಆತನ ದ್ವಿಚಕ್ರ ವಾಹನದಲ್ಲಿ ಸುಮಾರು 60 ಗ್ರಾಂ ಗಾಂಜಾ ದೊರೆತಿದ್ದು, ಈ ಬಗ್ಗೆ ವಿಚಾರಿಸಿದಾಗ ಈ ಗಾಂಜಾವನ್ನು ತನ್ನ ಸ್ವಂತ ಉಪಯೋಗಕ್ಕೆ ಮತ್ತು ಮಾರಾಟ ಮಾಡುವುದಕ್ಕಾಗಿ ಇರಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಆ  ಕೂಡಲೇ ಆರೋಪಿಯನ್ನು ಬಂಧಿಸಿದ ಪೊಲೀಸರು ಕಲಂ   20(©)(ii)(A), 27(B) NDPS ACT ನಂತೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿದ್ದಾರೆ.
ಅಲ್ಲದೆ ಸದ್ರಿ ಆರೋಪಿಯು ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಸಬ್‌ಜೈಲ್‌ನಲ್ಲಿ ನಡೆದ ಮಾಡೂರು ಇಸುಬು ಎಂಬಾತನ ಕೊಲೆ ಪ್ರಕರಣದ ಮುಖ್ಯ ಆರೋಪಿಯಾಗಿದ್ದು, ಮಂಗಳೂರು ಉತ್ತರ ಠಾಣೆಯಲ್ಲಿ ಕೊಲೆಗೆ ಯತ್ನ ಮತ್ತು ಮುಲ್ಕಿ ಠಾಣೆಯಲ್ಲಿ ಡಕಾಯಿತಿಗೆ ಯತ್ನ ಪ್ರಕರಣಗಳು ದಾಖಲಾಗಿ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಈತನು ಈ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯಾಗಿರುತ್ತಾನೆ ಎಂಬುದಾಗಿ ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.