ಸುದ್ದಿ ಕೃಷಿಕರ ಬಳಿಗೆ ಸಾವಯವ ಕೃಷಿ ಮಾಡುವತ್ತ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಸಾವಯವ ಕೃಷಿ ಮಾಡಿದ್ದರ ಜತೆಗೆ ಅದಕ್ಕೊಂದು ಮಾನ್ಯತೆಯ ಮುದ್ರೆಯೂ ಇದ್ದರೆ ಕೃಷಿಕರ ಕೆಲಸ ಸಾರ್ಥಕ. ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸಾವಯವ ಉತ್ಪನ್ನಗಳನ್ನು ಯಾವುದೇ ಆತಂಕ ಇಲ್ಲದೆ ರಫ್ತು ಮಾಡಬಹುದು. ಭಾರತದಲ್ಲಿ ನ್ಯಾಶನಲ್ ಪ್ರೋಗ್ರಾಂ ಆಫ್ ಆರ್ಗ್ಯಾನಿಕ್ ಪ್ರೊಡಕ್ಷನ್ (ಎನ್‌ಪಿ ಓಪಿ) ಎಂಬ ಸ್ಟಾಂಡರ್ಡ್ ಇದೆ. ಇದು ಬಹಳ ಕಟ್ಟು ನಿಟ್ಟಾದ ಗುಣಮಟ್ಟ ಕಾಯ್ದುಕೊಳ್ಳಲು ಇರುವ ವ್ಯವಸ್ಥೆ. ಒಂದಿಷ್ಟು ಪ್ರಮಾಣದಲ್ಲಿ ಕೀಟನಾಶಕ ಅಂಶ ಕಂಡು ಬಂದರೂ ಈ ಪ್ರಮಾಣಪತ್ರ ಸಿಗುವುದಿಲ್ಲ. ಅಮೆರಿಕದಲ್ಲಿ ನ್ಯಾಶನಲ್ ಆರ್ಗ್ಯಾನಿಕ್ ಪ್ರೋಗ್ರಾಂ (ಎನ್‌ಒಪಿ) ಎಂಬ ಸ್ಟಾಂಡರ್ಡ್ ಇದೆ. ಯುರೋಪ್‌ನಲ್ಲಿ ಇ ಯೂ ಎಂಬ ಸ್ಟಾಂಡರ್ಡ್ ಇದೆ. ಮೊದಲ ಮೂರು ವರ್ಷದಲ್ಲಿ ಎನ್‌ಪಿಯುಪಿ ಸ್ಟಾಂಡರ್ಡ್ ಸಿಗುತ್ತದೆ. ವಾರ್ಷಿಕ ಬೆಳೆಗಳಿಗೆ ಮೂರನೇ ವರ್ಷಕ್ಕೆ ಈ ಗುಣಮಟ್ಟದ ಪ್ರಮಾಣಪತ್ರ ಸಿಗುತ್ತದೆ. ಬಹುವಾರ್ಷಿಕ ಬೆಳೆಗಳಿಗೆ ನಾಲ್ಕನೇ ವರ್ಷದಲ್ಲಿ ಪ್ರಮಾಣ ಪತ್ರ ಸಿಗುತ್ತದೆ. ನಾಲ್ಕನೇ ವರ್ಷದಿಂದ ರಫ್ತು ಮಾಡುವ ಗುಣಮಟ್ಟದ ಸಾವಯವ ಬೆಳೆ ನಮ್ಮಲ್ಲಿರುತ್ತದೆ. ನಮ್ಮ ಸ್ಟಾಂಡರ್ಡ್ ಗೆ ಅಮೆರಿಕ, ಯೂರೋಪ್ ಸಹಿತ ಎಲ್ಲೆಡೆ ಮಾನ್ಯತೆ ಇದೆ.ಸಾವಯವ ಪ್ರಮಾಣಪತ್ರ ಪಡೆಯುವುದಕ್ಕೆ ಮೊದಲಾಗಿ ಕೃಷಿಕರನ್ನು ಸಿದ್ಧಪಡಿಸುವ ಹಂತ ಬಹಳ ಮಹತ್ವದ್ದು. ಮಣ್ಣು, ಬೆಳೆಗಳ ನಿರಂತರ ಪರಿಶೀಲನೆ ನಡೆಯುತ್ತ ಇರುತ್ತದೆ. ವಿದೇಶದಿಂದಲೂ ತಜ್ಞರು ಕ್ಷೇತ್ರ ಭೇಟಿ ಮಾಡುತ್ತ ಇರುತ್ತಾರೆ. ಅಗ್ರಿಕಲ್ಚರ್ ಪ್ರೊಡ್ಯೂಸ್ ಎಕ್ಸ್ಪೋರ್ಟ್ ಡೆವಲಪ್ಮೆಂಟ್ ಅಥಾರಿಟಿ (ಅಪೇ ಡಾ) ರಿಂದ ಸಾವಯವ ದೃಢೀಕರಣಕ್ಕೆ ನಿಯಮಿಸಲ್ಪಟ್ಟ ಇತರ ಸಂಸ್ಥೆಗಳು, ಉದಾಹರಣೆಗೆ ಕಂಟ್ರೋಲ್ ಯೂನಿ ಯನ್, ಲಕಾನ್, ಅದಿತಿ, ಐಎಂಓ ಇತ್ಯಾದಿ ಸಂಸ್ಥೆಯವರೂ ಬಂದು ರೈತರ ಆಡಿಟ್ ಮಾಡುತ್ತಾರೆ. ಅವರಿಗೆ ಪಕ್ಕಾ ಆದ ಮೇಲಷ್ಟೇ ಸಾವಯವ ರೈತ ಎನಿಸಿಕೊಳ್ಳುತ್ತಾರೆ.
ಕೇಂದ್ರ ಸರ್ಕಾರ ಪ್ರೊಡ್ಯೂಸರ್ ಗ್ಯಾರಂಟಿ ಸಿಸ್ಟಂ (ಪಿಜಿಎಸ್) ಎಂಬ ವ್ಯವಸ್ಥೆ ತಂದಿದೆ. ಎಲ್ಲ ರೈತರನ್ನು ಸಾವಯವ ಕೃಷಿಯತ್ತ ತರುತ್ತಿದ್ದಾರೆ. ರೈತರ ಗುಂಪೇ ರೈತರ ಗುಂಪನ್ನು ಆಡಿಟ್ ಮಾಡುವ ವ್ಯವಸ್ಥೆ ಇಲ್ಲಿ ನಡೆಯುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳ ಸಾವಯವ ನೀತಿ ಕೃಷಿಕರಿಗೆ ನೆರವಾಗುವ ರೀತಿ ಇದೆ. ಗುಂಪಿನಲ್ಲಿ ಸಾವಯವ ಕೃಷಿ ದೃಢೀಕರಣ ಮಾಡಲು ಪ್ರತಿಯೊಬ್ಬ ರೈತನಿಗೆ ನೆರವಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಪ್ರತಿ ರೈತನಿಗೆ ಎಕರೆಗೆ ಎರಡು ಸಾವಿರ ರೂಪಾಯಿ ಖರ್ಚು ಬರುತ್ತದೆ. ಒಬ್ಬ ರೈತ ಅವನೇ ಇದನ್ನು ಮಾಡುವುದಾದರೆ ಒಂದು ಲಕ್ಷದಷ್ಟು ಖರ್ಚು ಬರುತ್ತದೆ. ಮೊದಲ ಮೂರು ವರ್ಷ ಸರ್ಕಾರವೇ ಖರ್ಚು ನೋಡುತ್ತಿದೆ. ಫಲದ ಕಂಪೆನಿ, ಫಲದಾಯಿ ಪ್ರತಿಷ್ಠಾನ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ ಸಾವಯವ ಇಚ್ಚಿಸುವ ರೈತರಿಗೆ ಯಾವುದೇ ಹೊರೆ ಹಾಕದೆ ಎಲ್ಲ ಖರ್ಚು ನೋಡಿಕೊಳ್ಳುತ್ತದೆ. ಒಟ್ಟಾರೆ ಗುಣಮಟ್ಟದ ಸಾವಯವ ಬೆಳೆ, ಗಿಡಗಳು, ಸಸ್ಯಗಳ ಉತ್ಪಾದನೆಗೆ ವಿಶೇಷ ಗಮನ ಕೊಡಲಾಗುತ್ತಿದೆ.

ಸಾವಯವ ಕೃಷಿ ವಿಧಾನ ಮತ್ತು ಸರ್ಟಿಫಿಕೇಶನ್ ಬಗ್ಗೆ ಸುದ್ದಿ ಕೃಷಿ ವಿಭಾಗದ ವತಿಯಿಂದ ತರಬೇತಿ ವ್ಯವಸ್ಥೆ ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಏರ್ಪಡಿಸ ಲಾಗುವುದು. ಕೃಷಿ ಉತ್ಪನ್ನಗಳ ಖರೀದಿ ಬಗ್ಗೆ ಮಾಹಿತಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು.
ಉಮೇಶ ಅಡಿಗ, ತಾಂತ್ರಿಕ ನಿರ್ದೇಶಕರು, ಫಲದಆಗ್ರೊ ರೀಸರ್ಚ್ ಫೌಂಡೇಶನ್ ಪ್ರೈವೇಟ್ ಲಿಮಿಟೆಡ್

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.