HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಚೆಸ್ ಚತುರೆ ಈಶಾ ಶರ್ಮ ಇನ್ನು ಅಂತಾರಾಷ್ಟ್ರೀಯ ಮಾಸ್ಟರ್

ಬೆಳ್ತಂಗಡಿ: ಇಲ್ಲಿಯ ಖ್ಯಾತ ವೈದ್ಯರಾದ ಡಾ| ಶ್ರೀಹರಿ ಮತ್ತು ವಿದ್ಯಾ ಅಭಯ್ ದಂಪತಿ ಪುತ್ರಿ, ಚೆಸ್ ಚತುರೆ ಈಶಾ ಶರ್ಮರವರಿಗೆ ಕರ್ನಾಟಕದ ಮೊದಲ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಹಂಗೇರಿಯ ಬಲಟೋನ್ ಐಎಂ ಟೂರ್ನಮೆಂಟ್‌ನಲ್ಲಿ ಈ ಸಾಧನೆ ದಾಖಲಾಗಿದೆ. 2017ರಲ್ಲಿ ಶಾರ್ಜಾ ಮಾಸ್ಟರ್‌ನಲ್ಲಿ ಮೊದಲ ನಾರ್ಮ್, 2018ರ ವಿಶ್ವ ಕಿರಿಯರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ನಾರ್ಮ್ ಗಳಿಸಿದ್ದ ಇವರು ಹಂಗೇರಿಯಲ್ಲಿ ಮೂರನೇ ನಾರ್ಮ್ ಪಡೆದು ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ (ಡಬ್ಲ್ಯುಐಎಂ) ಬಿರುದಿಗೆ ಪಾತ್ರರಾದರು.
ಉಜಿರೆ ಎಸ್.ಡಿ.ಎಮ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ಈಶಾ ಶರ್ಮರವರು 2014ರಲ್ಲಿ ರಾಷ್ಟ್ರೀಯ ಶಾಲಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ, 2015ರಲ್ಲಿ ಮಹಿಳಾ ಕೆಡೆಟ್ ಮಾಸ್ಟರಾಗಿ, ಏಷಿಯನ್ ಕಿರಿಯರ ರ್‍ಯಾಪಿಡ್ ಟೂರ್ನಿಯಲ್ಲಿ ಸ್ವರ್ಣ ಪದಕ, ರಾಷ್ಟ್ರೀಯ ಅಂಡರ್-19 ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ, ಪ್ರಸ್ತುತ ಇವರು ರೇಟಿಂಗ್ 2181 ಪಡೆದು ಉತ್ತಮ ಸಾಧನೆ ಮಾಡಿ ಬೆಳ್ತಂಗಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.