ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷತೆಗೆ ಚುನಾವಣೆ ಸಾಧ್ಯತೆ: ಇಬ್ಬರು ಕಣದಲ್ಲಿ

 ಕಾರ್ಯದರ್ಶಿ ಆಯ್ಕೆ ನಿರಾಳ

ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷಗಾದಿಗೆ ಈ ಬಾರಿ ಚುನಾವಣೆ ನಡೆಯುವ ಎಲ್ಲಾ ಲಕ್ಷಣಗಳು ಗೋಚರಿಸಿದೆ.
ಅಧ್ಯಕ್ಷತೆಗಾಗಿ ಈಗಾಗಲೇ ಹಿರಿಯ ನ್ಯಾಯವಾದಿ ಹಾಗೂ ಕ್ರೈಸ್ತ ವಿವಾಹ ನೋಂದಣಾಧಿಕಾರಿ ಎಲೋಶಿಯಸ್ ಲೋಬೋ ಮತ್ತು ಪ್ರಸಾದ್ ಕೆ.ಎಸ್ ಅಂತಿಮ ಕಣದಲ್ಲಿದ್ದಾರೆ. ಈ ಮದ್ಯೆ ಸೆ. 19 (ಇಂದು) ಉಮೇದ್ವಾರಿಕೆ ವಾಪಾಸು ಪಡೆಯುವ ಕಡೆಯ ದಿನವಾಗಿದ್ದು, ಇಬ್ಬರಲ್ಲಿ ಯಾರಾದರೊಬ್ಬರು ಕಣದಿಂದ ಹಿಂದೆ ಸರಿದರೆ ಅಧ್ಯಕ್ಷರ ಆಯ್ಕೆ ಅವಿರೋಧವಾಗಿ ಘೋಷಣೆಯಾಗಲಿದೆ
ಚುನಾವಣಾಧಿಕಾರಿಯಾಗಿ ಈಗಾಗಲೇ ನಿಯೋಜಿತರಾಗಿರುವ ಹಿರಿಯ ನ್ಯಾಯವಾದಿ ಅಜಿತ್ ಕುಮಾರ್ ಅವರು ಕಾರ್ಯನಿರ್ವಹಿಸುತ್ತಿದ್ದು, ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆ ಅಂತಿಮಗೊಳಿಸಿಕೊಂಡಿದ್ದಾರೆ.
ಕಾರ್ಯದರ್ಶಿ ಆಯ್ಕೆ
ಸಂಘದ ಪ್ರ. ಕಾರ್ಯದರ್ಶಿ ಹುದ್ದೆಗೆ ಶ್ಕೃಶ್ರೀಕೃಷ್ಣ ಶೆಣೈ ಅವರ ಆಯ್ಕೆಯಾಗಿದೆ.
ಪ್ರಸ್ತುತ ಆಡಳಿತ ಮಂಡಳಿಯಿಂದ ಉತ್ತಮ ಕೆಲಸ:
ಪ್ರಸ್ತುತ ಚಾಲ್ತಿಯಲ್ಲಿರುವ ವಕೀಲರ ಸಂಘ ಈ ವರ್ಷ ಅನೇಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಮೆಚ್ಚುಗೆಗೆ ಪಾತ್ರವಾಗಿದೆ. ಕಲೆ, ಕ್ರೀಡೆ, ಸಂಘಟನಾ ಕ್ಷೇತ್ರದಲ್ಲಿ ಉತ್ತಮ ಸಾಧನೆಗಳನ್ನು ಮಾಡಿದೆ. ಅವರ ಅದಿಕಾರ ಅವಧಿಯಲ್ಲಿ ಬೆಳ್ತಂಗಡಿ ನ್ಯಾಯಾಲಯದ ವಕೀಲರ ಸಂಘದ ಕಟ್ಟಡಕ್ಕೆ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಿಂದಲೇ ಶಿಲಾನ್ಯಾಸ ಕೂಡ ನಡೆದಿದ್ದೂ ಸೇರಿದಂತೆ, ಯಕ್ಷಗಾನ ಕ್ಷೇತ್ರದಲ್ಲೂ ಸಾಧನೆಗಳನ್ನು, ಪ್ರಶಸ್ತಿಗಳನ್ನು ಪಡೆದುಕೊಳ್ಳುವಲ್ಲಿ ಕಾರಣವಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.