HomePage_Banner_
HomePage_Banner_
HomePage_Banner_

ಬೆಳಾಲು ಸಹಕಾರಿ ಗೋದಾಮು ಕಟ್ಟಡ ಉದ್ಘಾಟನೆ: ಪದ್ಮ ಗೌಡರಿಗೆ ಬೆಳ್ಳಿ ವರ್ಷದ ಅಧ್ಯಕ್ಷತೆಗೆ ಸನ್ಮಾನ

ಬೆಳಾಲು: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 68 ವರ್ಷಗಳನ್ನು ಪೂರೈಸಿದ್ದು, 1995 ರಿಂದ ಅದರ ಅಧ್ಯಕ್ಷರಾಗಿ ನೇತೃತ್ವ ವಹಿಸಿದ ಎಚ್. ಪದ್ಮ ಗೌಡರವರು ತನ್ನ ಅಧ್ಯಕ್ಷಾವಧಿಯ 25 ವರ್ಷಗಳನ್ನು ಪೂರೈಸಿರುತ್ತಾರೆ. ಕಷ್ಟಕರ ಸನ್ನಿವೇಶದಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳವರೊಂದಿಗೆ ಸಂಘದ ಚುಕ್ಕಾಣಿ ಹಿಡಿದ ಇವರು ನಿರಂತರ 25 ವರ್ಷಗಳಲ್ಲಿ ಸಂಘ ಅಭಿವೃದ್ಧಿಯ ಔನ್ನತ್ಯಕ್ಕೆ ಕಾರಣರಾಗಿದ್ದು ಇವರ ಯಶಸ್ವೀ ಅಧ್ಯಕ್ಷಗಿರಿಗಾಗಿ ಸಾರ್ವಜನಿಕ ಸನ್ಮಾನವನ್ನು ಸೆ.22 ರಂದು ಬೆಳಾಲು ಶ್ರೀ ಧ.ಮ. ಪ್ರೌಢಶಾಲೆಯ ವಠಾರದಲ್ಲಿ ಆಯೋಜಿಸಲಾಗಿರುತ್ತದೆ.
ಕೊಲ್ಪಾಡಿ ಕೃಷ್ಣ ಶರ್ಮರವರ ನೇತೃತ್ವದಲ್ಲಿ 1953 ರಲ್ಲಿ ಆರಂಭಗೊಂಡ ಸಂಘವು ಊರಿನ ಗಣ್ಯರಾದ ಕೊಲ್ಪಾಡಿ ನರಸಿಂಹ ಭಟ್ಟ, ಬೆಳಾಲುಗುತ್ತು ನೇಮಿರಾಜ ಕೊಟ್ಟಾರಿ ಮೊದಲಾದವರ ಸೇವೆಯೊಂದಿಗೆ ಬೆಳೆದು ಬಂದು ಆಡಳಿತ ಮಂಡಳಿ ನಿರ್ದೇಶಕರುಗಳ ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಹಲವು ಅಭಿವೃದ್ಧಿಗಳನ್ನು ಕಂಡು ಸದ್ಯ ರೂ.57  ಕೋಟಿಗಿಂತ ಅಧಿಕ ವಾರ್ಷಿಕ ವ್ಯವಹಾರವನ್ನು ನಡೆಸುವಷ್ಟು 1445  ಮಂದಿ ಸದಸ್ಯರೊಂದಿಗೆ ಬಲಿಷ್ಠವಾಗಿ ಬೆಳೆದಿದೆ. ಪದ್ಮ ಗೌಡ ರೊಂದಿಗೆ ಸಂಘದ ನಿವೃತ್ತ ಮುಖ್ಯಕಾರ್‍ಯನಿರ್ವಹಣಾಧಿಕಾರಿ ಪಿ.ರುಕ್ಮಯ ಗೌಡ ಹಾಗೂ ಬೆಳಾಲು ಗ್ರಾಮದವರಾಗಿದ್ದು, ಸರಕಾರಿ ನೌಕರರಾಗಿ ಸಾರ್ಥಕ ಸೇವೆಗೈದು ನಿವೃತ್ತರಾದ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಅಂಗನವಾಡಿ ಕಾರ್‍ಯಕರ್ತೆ ಲಲಿತ, ಶಿಕ್ಷಕಿ ಸುವರ್ಣಲತಾ, ಅಂಚೆ ಜವಾನ ಸುಂದರ ಗೌಡರವರಿಗೆ ಸನ್ಮಾನವನ್ನು ಹಮ್ಮಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಸುಸಜ್ಜಿತವಾದ ಸಂಘದ ನೂತನ ಗೋದಾಮು ಕಟ್ಟಡದ ಉದ್ಘಾಟನೆಯೂ ನೆರವೇರಲಿದ್ದು, ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬೆಳಾಲು ಗ್ರಾ.ಪಂ. ಅಧ್ಯಕ್ಷ ದಿನೇಶ್ ಕೋಟ್ಯಾನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಶಾಸಕ ಹರೀಶ್ ಕುಮಾರ್, ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ನಿರಂಜನ ಬಾವಂತಬೆಟ್ಟು, ಉಜಿರೆ ರಬ್ಬರ್ ಸೊಸೈಟಿಯ ಅಧ್ಯಕ್ಷ ಶ್ರೀಧರ ಜಿ. ಭಿಡೆ, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಸುಂದರ ಗೌಡ ಇಚ್ಚಿಲ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಸಹಕಾರ ಅಭಿವೃದ್ಧಿ ಅಧಿಕಾರಿ ಸುಕನ್ಯಾರವರು ಭಾಗವಹಿಸಲಿದ್ದು, ಬೆಳ್ತಂಗಡಿ ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಪಿ ಬೆಳಾಲು ಅಭಿನಂದನಾ ಭಾಷಣ ಮಾಡಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.