HomePage_Banner_
HomePage_Banner_
HomePage_Banner_

ಕಳಿಯ ಸಹಕಾರ ಸಂಘದ ಮಹಾಸಭೆ

Advt_NewsUnder_1

ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ವಸಂತ ಮಜಲು ರವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ  ಸಂಘದ ಸಹಕಾರಿ ಭವನದಲ್ಲಿ ಜರುಗಿತು.
2018-19 ನೇ ಸಾಲಿನ ವಾರ್ಷಿಕ ವರದಿ ಜಮಾ ಖರ್ಚಿನ ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಶಂಕರ ಕೆ.ಜಿ, 2018-19ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಎಂ.ರವಿರಾಜ್, ಅನುಪಾಲನಾ ವರದಿಯನ್ನು ಸಂಘದ ಲೆಕ್ಕಿಗ ಕವಿತಾ ಶೆಟ್ಟಿ ಮಂಡಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, 2018-19ನೇ ಸಾಲಿನ ಅಂತ್ಯಕ್ಕೆ ಎ ತರಗತಿ ಸದಸ್ಯರು 2140 ಇದ್ದು, ರೂ.1,62,51,705 ಪಾಲು ಬಂಡವಾಳ ಪಡೆಯಲಾಗಿದೆ. ಸದಸ್ಯರಿಂದ, ಠೇವಣಿದಾರರಿಂದ ಒಟ್ಟು ರೂ.22,91,62,523 ವಿವಿಧ ಠೇವಣಿಯನ್ನು ಸಂಗ್ರಹಿಸಿದ್ದು, ದ.ಕ ಜಿಲ್ಲಾ ಕೇಂದ್ರ ಸರಕಾರ ಬ್ಯಾಂಕಿಗೆ ರೂ.೧೦,೧೪,೩೯,೮೫೭ ಪಾವತಿಸಲು ಬಾಕಿ ಇದ್ದು, ವರ್ಷಾಂತ್ಯಕ್ಕೆ ಸದಸ್ಯರ ಒಟ್ಟು ರೂ.31,42,75,321 ಸಾಲ ಬರಲು ಬಾಕಿ ಇದ್ದು, ಇದರಲ್ಲಿ ರೂ.2,53,04,554 ವಾಯಿದೆ ದಾಟಿದ ಸಾಲವಿದ್ದು, ಸುಸ್ತಿ ಬಾಕಿದಾರ ಸದಸ್ಯರು ತಮ್ಮ ಬಾಕಿ ಸಾಲವನ್ನು ಮರುಪಾವತಿಸುವಂತೆ ವಿನಂತಿಸಿದರು.
ಸಂಘವು ಪ್ರಸ್ತುತ ಸಾಲಿನಲ್ಲಿ ಒಟ್ಟು1.41 ಕೋಟಿ ವ್ಯವಹಾರ ನಡೆಸಿದ್ದು, ರೂ.38.99 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ಸದಸ್ಯರಿಗೆ ಶೇ.10ರಷ್ಟು ಲಾಭಾಂಶ ನೀಡುವುದಾಗಿ ಘೋಷಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ, ನಿರ್ದೇಶಕರಾದ ಹರಿದಾಸ ಪಡಂತ್ತಾಯ, ದೇವಣ್ಣ ಮೂಲ್ಯ, ರಾಜೀವ ಗೌಡ, ರಾಜ್‌ಪ್ರಕಾಶ್ ಶೆಟ್ಟಿ, ರತ್ನಾಕರ, ಚಂದ್ರಾವತಿ, ಶಶಿಧರ ಶೆಟ್ಟಿ, ನೋಣಯ್ಯ, ಮಮತಾ ಉಪಸ್ಥಿತರಿದ್ದರು.
ಸಿಬ್ಬಂದಿ ಜಗನ್ನಾಥ ಪ್ರಾರ್ಥಿಸಿ, ನಿರ್ದೇಶಕ ಶೇಖರ ನಾಯಿಕ ಸ್ವಾಗತಿಸಿ, ಸಿಬ್ಬಂದಿ ಸಂತೋಷ ಕುಮಾರ್ ವಂದಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.