ಗುರುದೇವ ಪ್ರಥಮದರ್ಜೆ ಕಾಲೇಜಿನಿಂದ ಕೆಸರ್‌ಡೊಂಜಿ ದಿನ ಆಚರಣೆ

ಬೆಳ್ತಂಗಡಿ:  ಕೃಷಿ ಪ್ರಧಾನ ನಮ್ಮ ದೇಶದಲ್ಲಿ ಯುವ ಜನಾಂಗವು ಕೃಷಿಯತ್ತ ಆಸಕ್ತಿ ತೋರದೇ ಮೂಲ ಕಸುಬಿಗೆ ಹೊಡೆತ ಬಿದ್ದಿದೆ. ಕೃಷಿ ಚಟುವಟಿಕೆಯಿಂದ ಮಾತ್ರ ನೆಮ್ಮದಿ ಜೀವನ ಕಂಡುಕೊಳ್ಳಲು ಸಾಧ್ಯ ಎಂದು ನಿವೃತ್ತ ಕೃಷಿ ಅಧಿಕಾರಿ ಜೆ. ನಾರಾಯಣ ಸುವರ್ಣ ಹೇಳಿದರು.
ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇದರ ಸಾಹಿತ್ಯ ಮತ್ತು ಲಲಿತಕಲಾ ಸಂಘ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಇತ್ತೀಚೆಗೆ ಗುರುವಾಯನಕೆರೆ ಪಿಲಿಚಾಮುಂಡಿಕಲ್ಲು ಗದ್ದೆ ಮನೆಯಲ್ಲಿ ಹಮ್ಮಿಕೊಂಡ ಕೆಸರ್‌ಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ, ಮಾಜಿ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿಭಾಗವಹಿಸಿ ತರಗತಿ ಹೊರತುಪಡಿಸಿ ಜ್ಞಾನ ಸಂಪಾದನೆ ಜತೆಗೆ ಕೃಷಿ ಮಾಹಿತಿ, ನೇಜಿ ಹಾಗೂ ಗದ್ದೆಯಲ್ಲಿನ ಮಾಹಿತಿ ಅರಿತುಕೊಳ್ಳಬೇಕು.  ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ಪ್ರವೀಣ್ ಬಿ. ಪ್ರಸ್ತಾವನೆಗೈದರು. ಸಾಂಸ್ಕೃತಿಕ ಮತ್ತು ಸಾಹಿತ್ಯ ಹಾಗೂ ಲಲಿತಕಲಾ ಸಂಘದ ಸಂಯೋಜಕಿ ಮಲ್ಲಿಕಾ ಬಿ.ರಾವ್ ಹಾಗೂ ಮನುಜಾ ಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಿವಾಸಿನಿ ಸ್ವಾಗತಿಸಿದರು. ಸಂಧ್ಯಾ ಅತಿಥಿಗಳನ್ನು ಪರಿಚಯಿಸಿದರು. ಅಕ್ಷತಾ ವಂದಿಸಿದರು. ಅರ್ಚನಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಶಿಕ್ಷಕರು, ಸಿಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.