ಬೆಳ್ತಂಗಡಿಯಲ್ಲಿ ಹೃದ್ರೋಗ ತಪಾಸಣಾ ಶಿಬಿರ

ಆರೋಗ್ಯ ರಕ್ಷಣೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ: ಪೂಂಜ

ಬೆಳ್ತಂಗಡಿ: ಒಮೆಗಾ ಆಸ್ಪತ್ರೆ, ಮಂಗಳೂರು ಹಾರ್ಟ್ ಫೌಂಡೇಶನ್, ತಾಲೂಕು ಜೌಷಧ ವ್ಯಾಪಾರಸ್ಥರ ಸಂಘ, ಮಾಜಿ ಸೈನಿಕರ ಸಂಘ, ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ವಿವಿದೋದ್ದೇಶ ಸಹಕಾರಿ ಸಂಘ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಇವರ ಜಂಟಿ ಆಶ್ರಯದಲ್ಲಿ “ಉಚಿತ ಹೃದಯರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ” ಇತ್ತೀಚೆಗೆ  ಬೆಳ್ತಂಗಡಿ ಜೇಸೀ ಭವನದಲ್ಲಿ ನಡೆಯಿತು.
ಶಿಬಿರವನ್ನು ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ನಾವು ನಮ್ಮ ಆರೋಗ್ಯ ರಕ್ಷಣೆಯ ಜೊತೆಗೆ ಸಮಾಜ ಪರಿವರ್ತನೆಯ ಕಾರ್ಯ ಮಾಡಿದಾಗ ಸ್ವಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು. ದೇಶ ಬಲಿಷ್ಠವಾಗಲು ಸಮಾಜ ಆರೋಗ್ಯಪೂರ್ಣವಾಗಿರಬೇಕು. ಇಂತಹ ಸಮಾಜ ನಿರ್ಮಾಣದ ಜವಾಬ್ದಾರಿ ಸಮಾನ ಮನಸ್ಕ ಸಂಘಟನೆಗಳಿಗೆ ಇದೆ ಎಂದು ತಿಳಿಸಿದರು.
ತಾಲೂಕು ಜೌಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಗದೀಶ್ ಡಿ. ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ತಾಲೂಕು ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಕಾಂಚೋಡು, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಕೆ.ಜಯಕೀರ್ತಿ ಜೈನ್, ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ್ ಭಾಗವಹಿಸಿದ್ದರು.
ಸುಜಾತ ಗಣಪತಿ ಭಟ್ ಇವರ ಪ್ರಾರ್ಥನೆ ಬಳಿಕ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ ಸ್ವಾಗತಿಸಿದರು. ಮಂಜುಶ್ರೀ ಜೇಸಿ ಅಧ್ಯಕ್ಷ ಪ್ರಶಾಂತ ಲಾಯಿಲ ವಂದಿಸಿದರು. ಜೇಸಿ ಕಾರ್ಯದರ್ಶಿ ಗಣೇಶ್ ಶಿರ್ಲಾಲ್ ಅತಿಥಿಗಳನ್ನು ಆಹ್ವಾನಿಸಿದರು. ಒಮೇಗ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ| ಮುಕುಂದ್ ಮತ್ತು ಆಡಳಿತಾಧಿಕಾರಿ ಎಸ್.ಎಲ್ ಭಾರದ್ವಾಜ್ ತಪಾಸಣೆಯನ್ನು ನಡೆಸಿದರು. ಸುಮಾರು ೧೫೦ ಮಂದಿ ಇದರ ಪ್ರಯೋಜನ ಪಡೆದುಕೊಂಡರು. ಒಮೆಗಾ ಆಸ್ಪತ್ರೆಯ ಪಿಆರ್‌ಒಗಳಾದ ನಾಗರಾಜ್ ಮತ್ತು ಶ್ರೀನಾಥ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.