ಸಾರ್ವಜನಿಕ ರಸ್ತೆ ಅತಿಕ್ರಮಣ: ತಹಶೀಲ್ದಾರರಿಗೆ ದೂರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಅಂಡಿಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವ್ಯ ಗ್ರಾಮದ ಕುಂಟ್ಯಾನ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು  ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿರುವುದು ಮಾತ್ರವಲ್ಲದೆ, ಸಾರ್ವಜನಿಕ ರಸ್ತೆಯನ್ನು ಮುಚ್ಚಿರುವ ಕುರಿತು ಕುಂಟ್ಯಾನ ಮನೆತನದವರು ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರಿಗೆ ದೂರು ನೀಡಿದ್ದಾರೆ.

ಕುಂಟ್ಯಾನ- ಬೈಂಕೊಟ್ಟು ರಸ್ತೆಯನ್ನು ಆರೇಳು ತಲೆಮಾರುಗಳಿಂದ ಜನರು ಬಳಸುತ್ತಿದ್ದಾರೆ. ಇದು ಗ್ರಾಮ ಪಂಚಾಯಿತಿ ರಸ್ತೆಯಾಗಿದ್ದು, ಪಂಚಾಯಿತಿ ಅನುದಾನದಿಂದ ಇದನ್ನು ಪ್ರತಿವರ್ಷ ಅಭಿವೃದ್ಧಿ ಮಾಡಲಾಗುತ್ತಿದೆ. ಮಾತ್ರವಲ್ಲ, ರಸ್ತೆಯ ಬದಿಯಲ್ಲಿ ಬೀದಿದೀಪವನ್ನೂ ಅಳವಡಿಸಲಾಗಿದೆ. ಆದರೆ, ಹಿಮರಡ್ಡ ಹೊಸಮನೆ ಶಿವಪ್ರಸಾದ್ ಎಂಬಾತ ಎರಡು ವಾರದ ಹಿಂದೆ ಜೆಸಿಬಿ ತಂದು ಸಾರ್ವಜನಿಕ ರಸ್ತೆಯನ್ನು ಮುಚ್ಚಿದ್ದು ಮಾತ್ರವಲ್ಲದೆ, ಸುತ್ತಮುತ್ತಲಿನ ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿ ಆ ಜಾಗದಲ್ಲಿ ತೆಂಗು ಮತ್ತು ಬಾಳೆಯನ್ನು ನೆಟ್ಟಿರುತ್ತಾನೆ. ರಸ್ತೆಯಲ್ಲೇ ದೊಡ್ಡ ದೊಡ್ಡ ಗುಂಡಿಗಳನ್ನು ಮಾಡಿ, ಗಿಡಗಳನ್ನು ನೆಟ್ಟು ತೊಂದರೆ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಕುರಿತು ಬೆಳ್ತಂಗಡಿ ಜೆ.ಎಂ.ಎಫ್‌. ನ್ಯಾಯಾಲಯಕ್ಕೆ ಶಿವಪ್ರಸಾದ್ ತನ್ನ ಪಟ್ಟಾ ಜಾಗದ ಪಹಣಿ ನೀಡಿ, ರಸ್ತೆ ರಚಿಸುವ ಸಲುವಾಗಿ ನಿರ್ಬಂಧಕಾಜ್ಞೆ ತರಲು ಪ್ರಯತ್ನಿಸಿರುತ್ತಾನೆ. ಈ ಸಂಬಂಧ ಹಲವರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಜಾಗದಲ್ಲಿರುವ ರಸ್ತೆಯನ್ನು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.  ದೂರು ಸ್ವೀಕರಿಸಿದ ತಹಶೀಲ್ದಾರರು, ಈ ಬಗ್ಗೆ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದರು ಎಂದು ದೂರುದಾರರಾದ ಶಿವಯ್ಯ ಪೂಜಾರಿ ಮತ್ತು ಪ್ರಭಾಕರ ಹೇಳಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.