HomePage_Banner_
HomePage_Banner_
HomePage_Banner_
HomePage_Banner_
HomePage_Banner_

ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ

ಬೆಳ್ತಂಗಡಿ : ದ.ಕ ಜಿಲ್ಲಾ ಪಂಚಾಯತ್ ಬೆಳ್ತಂಗಡಿ, ಯುವ ಸಬಲೀಕರಣ, ಕ್ರೀಡಾ ಇಲಾಖೆ, ಯುವಜನ ಒಕ್ಕೂಟ ಬೆಳ್ತಂಗಡಿ, ನಿಸರ್ಗ ಯುವಜನೇತರ ಸಂಘ ಬರಂಗಾಯ ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ದ ಉದ್ಘಾಟನಾ ಸಮಾರಂಭವು ಇಂದು(ಸೆ.14 ) ಉಜಿರೆ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಸದಸ್ಯರಾದ ಮಮತಾ ಎಂ.ಶೆಟ್ಟಿ, ಸೌಮ್ಯಲತಾ. ಜಯಂತ ಗೌಡ, ನ .ಪಂ ಸದಸ್ಯ ಜನಾರ್ಧನ  ಕುಲಾಲ್,  ತಾ.ಪಂ ಸದಸ್ಯ ಪ್ರವೀಣ್ ಗೌಡ,  ಶಶಿಧರ ಎಂ.ಕಲ್ಮಂಜ  ಉಪಸ್ಥಿತರಿದ್ದರು. ತಾ.ಪಂ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಪ್ರಭಾಕರ ನಾರಾವಿ, ಬೆಳ್ತಂಗಡಿ ಯುವಜನ ಒಕ್ಕೂಟ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ  ರಮೇಶ್ ಕುಮಾರ್,  ನಿಸರ್ಗ ಯುವ ಜನ ಸಂಘದ ಅಧ್ಯಕ್ಷ ಪುನೀತ್ ಕುಮಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಭಾಕರ್ ನಾರಾವಿ   ಸ್ವಾಗತಿಸಿ ಪ್ರಾಸ್ತಾವಿಸಿದರು.  ಕಾರ್ಯಕ್ರಮವನ್ನು ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.