HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಬೆಳ್ತಂಗಡಿ ಯುವವಾಹಿನಿ ಆಶ್ರಯದಲ್ಲಿ ‘ಗುರು ನಮನ’

 

ಬೆಳ್ತಂಗಡಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ತಾಲೂಕಿನ ಯುವವಾಹಿನಿ ಆಶ್ರಯದಲ್ಲಿ, ಯುವವಾಹಿನಿ ಮಹಿಳಾ ಸಂಚಾಲನಾ ಸಮಿತಿ ಇದರ ಸಹಕಾರದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜನ್ಮದಿನಾಚರಣೆಯ ಪ್ರಯುಕ್ತ ಗುರು ನಮನ ಕಾರ್ಯಕ್ರಮವು ಗುರುವಾಯನಕೆರೆ ಶಾರದಾ ಮಂಟಪದಲ್ಲಿ ಇಂದು (ಎ.13) ಜರುಗಿತು.


ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯುವವಾಹಿನಿ ತಾಲೂಕು ಅಧ್ಯಕ್ಷ ಹರೀಶ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಗುರುದೇವ ಪ.ಪೂ.ಕಾಲೇಜು ಉಪನ್ಯಾಸಕಿ ಹೇಮಾವತಿ ಗುರುಸಂದೇಶ ನೀಡಿದರು.


ತಾ.ಪಂ ಸದಸ್ಯ ಗೋಪಿನಾಥ ನಾಯಕ್, ಗುರುವಾಯನಕೆರೆ ಗೆಳೆಯರ ಬಳಗದ ಅಧ್ಯಕ್ಷ ಕೆ ಮೋಹನ್, ಶ್ರೀ ಶಾರದಾಂಬ ಭಜನಾ ಮಂಡಳಿ ಅಧ್ಯಕ್ಷೆ ರೀತಾ ವೈ ಆಚಾರ್ಯ, ಯುವವಾಹಿನಿ ಮಹಿಳಾ ಸಂಚಾಲನಾ ಸಮಿತಿ ಪ್ರಧಾನ ಸಂಚಾಲಕಿ ಸುಜಾತಾ ಅಣ್ಣಿ ಪೂಜಾರಿ, ಯುವವಾಹಿನಿ ನಾರಾಯಣ ಗುರು ತತ್ವಪ್ರಚಾರ ಘಟಕದ ನಿರ್ದೇಶಕ ಎಂ.ಕೆ ಪ್ರಸಾದ್, ಮತ್ತಿತರ ಗಣ್ಯರು, ಯುವವಾಹಿನಿ ಘಟಕದ ಪದಾಧಿಕಾರಿಗಳು, ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.