HomePage_Banner_
HomePage_Banner_
HomePage_Banner_
HomePage_Banner_
HomePage_Banner_

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ‘ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ’ ಆಚರಣೆ

ಬೆಳ್ತಂಗಡಿ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜನ್ಮದಿನಾಚರಣೆಯನ್ನು ಸೆ.13 ರಂದು ತಾಲೂಕು ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಆಚರಿಸಲಾಯಿತು.
ತಹಶೀಲ್ದಾರ್ ಗಣಪತಿ ಶಾಸ್ತ್ರಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ.ಸೆಬಾಸ್ಟಿನ್ ನೆರವೇರಿಸಿದರು.
ಪೆರೋಡಿತ್ತಾಯಕಟ್ಟೆ ಹಿ.ಪ್ರಾ. ಶಾಲಾ ಸಹಶಿಕ್ಷಕ ದೇವುದಾಸ್ ನಾಯಕ್ ಮುಖ್ಯ ಭಾಷಣಾಕಾರರಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ಗೋಪಿನಾಥ ನಾಯಕ್, ಕೃಷ್ಣಯ್ಯ ಆಚಾರ್ಯ, ಸುಧೀರ್ ಸುವರ್ಣ, ಕೇಶವತಿ, ನ.ಪಂ.ಸದಸ್ಯೆ ರಜನಿ ಕುಡ್ವ, ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.