ವೀರಕೇಸರಿ ಬೆಳ್ತಂಗಡಿಯಿಂದ ರೂ.1ಲಕ್ಷದ 65 ಸಾವಿರ ನೆರವು

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 3 ವರ್ಷ 3 ತಿಂಗಳುಗಳಲ್ಲಿ 92  ಸೇವಾ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿತು. ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 4ನೇ ವರ್ಷದ ಪಯಣದಲ್ಲಿ 2 ಕುಟುಂಬಕ್ಕೆ ಮತ್ತು ತಾಲೂಕಿನ ನೆರೆ ಸಂತ್ರಸ್ತರಿಗೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ.
90ನೇ ತುರ್ತು ಸೇವಾ ಯೋಜನೆಯಾಗಿ ತಾಲೂಕಿನಲ್ಲಿ ಸಂಭವಿಸಿದ ಭೀಕರ ನೆರೆ ಪ್ರವಾಹಕ್ಕೆ ತುತ್ತಾದ ಕುಟುಂಬಗಳ ನೆರವಿಗಾಗಿ ಸಂಘಟನೆ ಮುಖಾಂತರ ಸಂಗ್ರಹಿಸಿದ ರೂ. 1ಲಕ್ಷದ 25  ಸಾವಿರ ಮೊತ್ತದ ಚೆಕ್ ಅನ್ನು ಶಾಸಕರ ಕಾಳಜಿ ನಿಧಿಗೆ ಶಾಸಕರಾದ ಹರೀಶ್ ಪೂಂಜ ಇವರಲ್ಲಿ ಹಸ್ತಾಂತರಿಸಲಾಯಿತು.
91 ನೇ ಸೇವಾಯೋಜನೆಯಾಗಿ ತಾಲೂಕಿನ ಮುಂಡಾಜೆ ನಿವಾಸಿ ಅಭಿಷೇಕ್ ಇವರ ಪುತ್ರ ಅಯಾಂಕ್ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತಿದ್ದು ಇವರ ಚಿಕಿತ್ಸಾ ವೆಚ್ಚಕ್ಕಾಗಿ ರೂ.20ಸಾವಿರ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.
92ನೇ ಸೇವಾಯೋಜನೆಯಾಗಿ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕೊಡಂಗೆಕೋಡಿ ನಿವಾಸಿಯಾಗಿರುವ ರಾಜೇಶ್ ಆಚಾರ್ಯ ಇವರ ಪತ್ನಿಯ ಮೇಲೆ ಅಡಿಕೆ ಮರ ಬಿದ್ದು ಮೂಳೆಮುರಿಕ್ಕೊಳಗಾಗಿರುವ ಇವರ ಚಿಕಿತ್ಸಾ ವೆಚ್ಚಕ್ಕಾಗಿ ರೂ.20 ಸಾವಿರ ಮೊತ್ತದ ಚೆಕ್ ನೀಡಲಾಯಿತು.
ಈ 3 ಸೇವಾ ಯೋಜನೆಗಳಿಗೆ ಒಟ್ಟು 1,65,000 ರೂ ಗಳನ್ನು ವೀರಕೇಸರಿ ಸದಸ್ಯರ ಸಹಕಾರದಿಂದ ಸಂಗ್ರಹಿಸಿ, ಶಾಸಕರಾದ ಹರೀಶ್ ಪೂಂಜ ಮತ್ತು ಸಂಘಟಣೆಯ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರ ಮಾಡಲಾಯಿತು. ಈ ಯೋಜನೆಯ ಯಶಸ್ಸಿನೊಂದಿಗೆ ಒಟ್ಟು 92 ಸೇವಾ ಯೋಜನೆಗಳನ್ನು ಪೂರೈಸಿದ ಕೀರ್ತಿ ವೀರಕೇಸರಿ ಬೆಳ್ತಂಗಡಿ ಸಂಘಟಣೆಗೆ ಸಲ್ಲುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.