ಸಂರಕ್ಷಣೆ ನಮ್ಮ ಹೊಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಮಂಜುನಾಥ್. ಎಸ್ ಎಸ್.ಡಿ.ಎಂ ಕಾಲೇಜು ಉಜಿರೆ

ಪರಿಸರ ರಕ್ಷಣೆ ಎಲ್ಲರ ಹೊಣೆ. ಅದರಲ್ಲೂ ವಿದ್ಯಾರ್ಥಿ ಮತ್ತು ಯುವ ಜನರ ಪಾತ್ರ ಅತಿ ಮುಖ್ಯ. ದೇಶದ ಜವಾಬ್ದಾರಿಯ ಜೋತೆಗೆ ಪರಿಸರ ಸಂರಕ್ಷಣೆ ಸಮರ್ಥವಾಗಿ ನಿರ್ವಹಿಸಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಮನುಷ್ಯನ ದುರಾಸೆಯಿಂದಾಗಿ ಇಡೀ ಪ್ರಕೃತಿ ಆಪತ್ತಿನ ಅಂಚಿಗೆ ಬಂದಿದೆ. ನೈಸರ್ಗಿಕ ಸಂಪನ್ಮೂಲಗಳಿದ್ದರೂ, ಅದರ ಉತ್ತಮ ರೀತಿಯ ಬಳಕೆಯ ಕೊರತೆಯಿಂದ ಅದು ಅಪಾಯ ಘಟನೆಗಳಿಗೆ ದಾರಿ ಮಾಡುತ್ತಿದೆ.
ಮನುಷ್ಯನು ಯಾವಾಗಲು ಸ್ವಾರ್ಥ ಭಾವನೆಯಿಂದ ಯೋಚನೆ ಮಾಡುತ್ತಿದ್ದಾನೆ ಎಲ್ಲವು ತನಗಾಗಿಯೆ ಇದೆ ಎಂದು ಭಾವಿಸಿದ್ದಾನೆ .ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುವ ಸಂದರ್ಭ ಬಂದಿದೆ. ನದಿ, ಕೆರೆ, ಹೊಂಡ, ಬಾವಿಗಳು ಸೇರಿದಂತೆ ನೀರಿನ ನಾನ ಮುಖಗಳು ಹಾಳಗುತ್ತಿವೆ. ಇದಕ್ಕೆ ಮಾನವನ ಅತಿ ಆಸೆಯೆ ಕಾರಣ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಮುಂದೊಂದು ದಿನ ಇದೆ ಮಾರಕವಾಗಬಹುದು. ಹಾಗಾಗಿ ಈಗಲಾದರೂ ಹೊಸ ಬದುಕು ಕಟ್ಟಿಕೊಳ್ಳದ್ದಿದರೆ ಭವಿಷ್ಯದಲ್ಲಿ ಮಾನವ ಪ್ರಾಣಿಗೆ ಉಳಿಗಾಲವಿಲ್ಲ.
ನಮ್ಮ ಪೂರ್ವಜರು ಪ್ರಕೃತಿಯನ್ನು ದೇವರು ಎಂದು ಪೂಜಿಸುತ್ತಿದ್ದರಿಂದಲೆ ನಾವು ಈಗ ಆರಾಮವಾಗಿರುವುದು. ಅವರು ನಮ್ಮ ಹಾಗೆ ಯೊಚಿಸಿದ್ದಲ್ಲಿ ನಮಗೆ ಈ ಜೀವನ ಇರುತ್ತಿದ್ದಿಲ್ಲ. ಹಾಗಾಗಿ ಪ್ರಕೃತಿಯ ರಕ್ಷಣೆ ಎಲ್ಲರ ಹೊಣೆ ಮತ್ತು ಕರ್ತವ್ಯವೂ ಆಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.