ಮುಂಗಾರು ಬೆಳೆ ಸಮೀಕ್ಷೆ

ಬೆಳ್ತಂಗಡಿ: 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಸೆಪ್ಟೆಂಬರ್ ಮಾಹೆಯಲ್ಲಿ ಜಿಲ್ಲಾದ್ಯಂತ ಆರಂಭವಾಗುತ್ತಿದೆ. ಸಮೀಕ್ಷೆ ನಡೆಸುವವರಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸಿಬ್ಬಂದಿಗಳು ಹಾಗೂ ನಿಮ್ಮ ಗ್ರಾಮದವರೇ ಆದ ಯುವಕರು ಬೆಳೆ ಸಮೀಕ್ಷೆಯನ್ನು ಮೊಬೈಲ್ ತಂತ್ರಾಂಶದ ಮೂಲಕ ಕೈಗೊಳ್ಳುತ್ತಾರೆ.

ಮೊಬೈಲ್ ತಂತ್ರಾಂಶದ ಮೂಲಕ ನಡೆಸುವ ಬೆಳೆ ಸಮಿಕ್ಷೆ ಆಧಾರದ ಮೇಲೆಯೇ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ, ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಇತ್ಯಾದಿಗಳು ನಿರ್ಧಾರವಾಗುವುದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಖುದ್ದು ಹಾಜರಿದ್ದು, ಸಮೀಕ್ಷೆಗಾರರಿಗೆ ತೋರಿಸಲು ವಿನಂತಿಸಲಾಗಿದೆ.
ಬೆಳೆ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗಿರುವ ನಿಮ್ಮ ಗ್ರಾಮದ ಯುವಕರಿಗೆ ನಿಮ್ಮ ಜಮೀನನ್ನು ಮತ್ತು ಬೆಳೆದಿರುವ ಬೆಳೆಯನ್ನು ತೋರಿಸುವುದರ ಮೂಲಕ ಸಹಕರಿಸಿ, ರೈತರು ತಮ್ಮ ಮೊಬೈಲ್ ನಂಬರನ್ನು ಬೆಳೆ ಸಮೀಕ್ಷೆ ಮಾಡುವ ಯುವಕರಿಗೆ ನೀಡಲು ಕೋರಲಾಗಿದೆ. ಇದರಿಂದ ನಾವು ನಿಮಗೆ ನೀವು ಬೆಳೆದಿರುವ ಬೆಳೆ ಮಾಹಿತಿ ಬಗ್ಗೆ ಎಸ್‌ಎಂಎಸ್ ಕಳುಹಿಸಲು ಸಾಧ್ಯವಾಗಲಿದೆ ಎಂದು ದ.ಕ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.