HomePage_Banner_
HomePage_Banner_

ಶ್ರೀ ಕೇಶವ ಕೃಪಾದಿಂದ ಸರಣಿ ಶಿವಪೂಜಾ ಅಭಿಯಾನ

ಬೆಳ್ತಂಗಡಿ: ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ವೇದಾಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಸರಣಿ ಶಿವಪೂಜಾ ಅಭಿಯಾನ ಆಯೋಜಿಸಲಾಗುತ್ತಿದ್ದು, ಈ ಬಾರಿಯ 419ನೇ ಶಿವಪೂಜೆಯು ಸೆ.15ರಂದು ಅರಸಿನಮಕ್ಕಿ ಕೊಡ್ಯಡ್ಕದ ಶ್ರೀಮತಾ ಉದಯಶಂಕರ್ ಭಟ್ ಇವರ ನಿವಾಸದಲ್ಲಿ ನಡೆಯಲಿದೆ ಎಂದು ಸರಣಿ ಶಿವಪೂಜಾ ಸಂಚಾಲಕ ಉದಯಶಂಕರ್ ಭಟ್ ತಿಳಿಸಿದರು.
ಅವರು ಸೆ.10ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕೇಶವ ಕೃಪಾದ ವೇದ ಶಿಬಿರಗಳಲ್ಲಿ ವೈದಿಕ ಪಠ್ಯಭಾಗವನ್ನು ಕಲಿತ ವಿದ್ಯಾರ್ಥಿ ಅದನ್ನು ಸಮರ್ಪಕವಾಗಿ ಪ್ರಯೋಗಿಸುವ ಉದ್ದೇಶದಿಂದ ಶಿವಪೂಜೆಯನ್ನು ಮಾಡಿ ತೋರಿಸಲಾಗುತ್ತದೆ. ಪ್ರತಿ ವರ್ಷ ವೇದ ಶಿಬಿರದ ಬಳಿಕ ವಾರಕ್ಕೊಬ್ಬ ವಿದ್ಯಾರ್ಥಿಯ ಮನೆಯಲ್ಲಿ ನಡೆಸಿಕೊಂಡು ಬರಲಾಗುತ್ತಿದ್ದು, ಈ ವರ್ಷದ ಜೂನ್ ತಿಂಗಳ ಪ್ರಥಮ ವಾರದಿಂದ 407ನೇ ಶಿವಪೂಜೆಯನ್ನು ಆರಂಭಿಸಿ ಸೆ.15ಕ್ಕೆ 419ನೇ ಶಿವಪೂಜೆಯೊಂದಿಗೆ ಸಮಾಪನಗೊಳ್ಳಲಿದೆ ಎಂದು ತಿಳಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಪುಟ್ಟ ಬಾಲೆಯರಿಗೆ ವೇದಾಧ್ಯಯನ ಮಾಡಿಸಿ ಮಹಿಳಾ ವೈದಿಕರನ್ನು ಹುಟ್ಟು ಹಾಕುವ ವಿನೂತನ ಪ್ರಯೋಗಕ್ಕೆ ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಮುಂದಡಿಯಿಟ್ಟಿದೆ. ಸಂಪ್ರದಾಯವಾದಿಗಳು ಕೇಶವ ಕೃಪಾದ ಈ ನಡೆಯನ್ನು ಸ್ವಾಗತಿಸಿರುವುದು ಗಮನಾರ್ಹ, ಪ್ರತಿಷ್ಠಾನದ ಇಚ್ಛೆಗೆ ಪೂರಕವಾಗಿ ಕೇರಳದ ಗಡಿಭಾಗದ ಅಡೂರಿನ ಕು| ಅಸೀಮಾ ಅಗ್ನಿಹೋತ್ರಿ ಎನ್ನುವ ಪುಟ್ಟ ಬಾಲಕಿ ಪ್ರತಿಷ್ಠಾನದ ಮೊದಲ ವಿದ್ಯಾರ್ಥಿನಿಯಾಗಿ ಕೇಶವ ಕೃಪಾದ ಮೊದಲ ಮಹಿಳಾ ವೈದಿಕಳಾಗಿ ಗುರುತಿಸಿಕೊಂಡಿದ್ದಾಳೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದರು.
ಪ್ರಾಯೋಗಿಕ ಸರಣಿ ಶಿವಪೂಜಾ ಅಭಿಯಾನದ ಸಮಾಪನ ಸಮಾರಂಭದ ಬಗ್ಗೆ ಮಾಹಿತಿ ನೀಡಿ ವೇದ ವೈದಿಕ ಕ್ಷೇತ್ರದಲ್ಲಿ ವಿಶಿಷ್ಠ ಸಾಧನೆಗೈದ ದರ್ಬೆತ್ತಡ್ಕ ಶ್ರೀ ಶಂಕರವೇದ ವಿದ್ಯಾ ಗುರುಕುಲದ ಪ್ರಧಾನಾಚಾರ್ಯ ಬ್ರಹ್ಮಶ್ರೀ ವೇ|ಮೂ| ಅಂಶುಮಾನ್ ಅಭ್ಯಂಕರ್ ಘನಪಾಠಿ ಇವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿ ಪೋಷಕರಾದ ರಾಜಾರಾಮ್ ಭಟ್ ಕಲ್ಲುಗುಂಡಿ, ಸುದರ್ಶನ ಭಟ್ ಉಜಿರೆ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.