HomePage_Banner_
HomePage_Banner_
HomePage_Banner_

ಸೆ.15: ಉಚಿತ ಹೃದಯರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ

ಬೆಳ್ತಂಗಡಿ: ಒಮೆಗಾ ಆಸ್ಪತ್ರೆ, ಮಂಗಳೂರು ಹಾರ್ಟ್ ಫೌಂಡೇಶನ್, ತಾಲೂಕು ಜೌಷಧ ವ್ಯಾಪಾರಸ್ಥರ ಸಂಘ, ಮಾಜಿ ಸೈನಿಕರ ಸಂಘ, ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜೆಸಿಐ ಬೆಳ್ತಂಗಡಿ ಮಂಜುಶ್ರೀ, ರಾಜ್ಯ ಸರಕಾರಿ ನೌಕರರ ಸಂಘ ಇವರ ಜಂಟಿ ಆಶ್ರಯದಲ್ಲಿ ಖ್ಯಾತ ಹೃದ್ರೋಗ ತಜ್ಞರಾದ ಡಾ| ಮುಕುಂದ್ ಇವರ ನೇತೃತ್ವದಲ್ಲಿ ಉಚಿತ ಹೃದಯರೋಗ ಮತ್ತು ಮಧುಮೇಹ ತಪಾಸಣಾ ಶಿಬಿರ ಸೆ. 15ರಂದು ಬೆಳ್ತಂಗಡಿ ಮಾದರಿ ಶಾಲಾ ಬಳಿಯ ಜೇಸಿ ಭವನದಲ್ಲಿ ನಡೆಯಲಿದೆ ಎಂದು ಜೌಷಧ ವ್ಯಾಪಾರಸ್ಥರ ಸಂಘದ ತಾಲೂಕು ಅಧ್ಯಕ್ಷ ಡಿ. ಜಗದೀಶ್ ತಿಳಿಸಿದರು.
ಅವರು ಸೆ.10ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 2004 ರಿಂದ ಬೆಳ್ತಂಗಡಿಯಲ್ಲಿ ಇಂತಹ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಅಂದು ಬೆಳಗ್ಗೆ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದು, ವಿವಿಧ ಸಂಘಟನೆಗಳ ಮುಖ್ಯಸ್ಥರು ಅತಿಥಿಗಳಾಗಿದ್ದಾರೆ. ಶಿಬಿರದಲ್ಲಿ ಇ.ಸಿ.ಜಿ, ರಕ್ತದೊತ್ತಡ(ಬಿ.ಪಿ), ಮಧುಮೇಹ, ಹೃದಯ ಸ್ಕ್ಯಾನಿಂಗ್(ಎಕೋಕಾರ್ಡಿಯೋಗ್ರಾಂ), ಹೃದಯ ತಜ್ಞರಿಂದ ಪರೀಕ್ಷೆ ಹಾಗೂ ಸಲಹೆ, ಡಯಟೇಶನ್ ಮಾರ್ಗದರ್ಶನವನ್ನು ಉಚಿತವಾಗಿ ನೀಡಲಾಗುವುದು. ಶಿಬಿರದ ಬಳಿಕ ಅಗತ್ಯವಿರುವವರಿಗೆ ಓಮೇಗಾ ಆಸ್ಪತ್ರೆಯಲ್ಲಿ ಆದ್ಯತೆಯ ಮೇರೆಗೆ ಚಿಕಿತ್ಸೆ ನಡೆಸಲಾಗುವುದು ಎಂದರು.
ಹೃದಯ ಸ್ಕ್ಯಾನಿಂಗ್, ಟಿ.ಎಮ್.ಟಿ, ಹೃದಯ ರಕ್ತನಾಳಗಳ ಪರೀಕ್ಷೆ, ಕೊರೊನರಿ ಕ್ಯಾಲ್ಸಿಯಂ ಸ್ಕೋರಿಂಗ್ ಟೆಸ್ಟ್‌ಗಳನ್ನು ಹಾಗೂ ಎಂಜಿಯೋಗ್ರಾಂ, ಎಂಜಿಯೋಪ್ಲಾಸ್ಟಿಯನ್ನು ಶೇ50 ರಿಯಾಯತಿ ದರದಲ್ಲಿ ಮಾಡಿಕೊಡಲಾಗುವುದು. ಶಿಬಿರದಲ್ಲಿ ಉಚಿತವಾಗಿ ಎಲ್ಲಾ ಶಿಬಿರಾರ್ಥಿಗಳಿಗೂ ಹೆಲ್ತ್‌ಕಾರ್ಡ್ ವಿತರಿಸಲಾಗುವುದು. ಶಿಬಿರಕ್ಕೆ ಬರುವಾಗ ತಮ್ಮ ಹಳೆಯ ವೈದ್ಯಕೀಯ ದಾಖಲೆಗಳು, ಖಾಯಿಲೆಯ ಬಗ್ಗೆ ಇರುವ ಮಾಹಿತಿಯನ್ನು ತರುವಂತೆ ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ರೋಟರಿ ಅಧ್ಯಕ್ಷ ಜಯರಾಮ್, ಲಯನ್ಸ್ ಅಧ್ಯಕ್ಷ ವಸಂತ ಶೆಟ್ಟಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಜಯಕೀರ್ತಿ ಜೈನ್, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಕಾಂಜೋಡು, ಜೇಸಿ ಅಧ್ಯಕ್ಷ ಪ್ರಶಾಂತ ಲಾಯಿಲ, ಒಮೆಗಾ ಆಸ್ಪತ್ರೆಯ ಪಿಆರ್‌ಒಗಳಾದ ನಾಗರಾಜ್ ಮತ್ತು ಶ್ರೀನಾಥ್ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.