HomePage_Banner_
HomePage_Banner_

ತ್ಯಾಜ್ಯ ನಿರ್ವಹಣೆಗೆ ಎರಡು ರೀತಿಯಿಂದ ಖರ್ಚು ಆರೋಪ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಿನಿ ವಿಧಾನ ಸೌಧದಲ್ಲಿ ಲೋಕಾಯುಕ್ತ ಕುಂದುಕೊರತೆ ಸಭೆ
 

ಬೆಳ್ತಂಗಡಿ: ಉಜಿರೆ ಗ್ರಾ.ಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ 18 ಲಕ್ಷ ರೂ.ಗಳಿಗೆ ಟೆಂಡರ್ ವಹಿಸಲಾಗಿದ್ದು, ತ್ಯಾಜ್ಯವನ್ನು ಗೊಬ್ಬರ ಮಾಡಬೇಕಾದ ಬದಲು ವರ್ಷಕ್ಕೊಮ್ಮೆ ಬೆಂಕಿಕೊಟ್ಟು ಸುಡಲಾಗುತ್ತಿದೆ. ಆ ಮೂಲಕ ಅದರ ನಿರ್ವಹಣೆಗೂ ಪ್ರತ್ಯೇಕ ದುಡ್ಡು ಖರ್ಚು ಮಾಡಲಾಗುತ್ತಿದೆ. ಇದು ಸರಿಯಾದ ಕ್ರಮ ಅಲ್ಲ. ಈ ಪರಿ ಸರಕಾರಕ್ಕೆ ಆಗುವ ನಷ್ಟವನ್ನು ಭರಿಸುವವರು ಯಾರು ಎಂದು ಉಜಿರೆ ಗ್ರಾಮದ ಸುಬ್ರಹ್ಮಣ್ಯ ಭಟ್ ಬೋಳಂಬಿ ಪ್ರಶ್ನಿಸಿದರು.
ಬೆಳ್ತಂಗಡಿ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಸೆ. 11 ರಂದು ನಡೆದ ಲೋಕಾಯುಕ್ತ ವಿಭಾಗದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಅವರು ಈ ಪ್ರಶ್ನೆ ಎತ್ತಿದರು.
ಈ ಬಗ್ಗೆ ಉತ್ತರ ನೀಡಿದ ತಾ.ಪಂ ವ್ಯವಸ್ಥಾಪಕರು, ಈ ಬಗ್ಗೆ ಈಗಾಗಲೇ ಗ್ರಾ.ಪಂ. ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.


ಮುಖ್ಯವಾದ ಉಜಿರೆ ಪೇಟೆ ಶೈಕ್ಷಣಿಕವಾಗಿ ಬೆಳೆದಿದ್ದು, ಪ್ರತಿದಿನ ಬೆಳಗ್ಗೆ ಸಂಜೆ ಏಕಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಡೆದುಕೊಂಡು ಬರುತ್ತಾರೆ. ಆದರೆ ರಸ್ತೆಯಂಚಿನ ಅಂಗಡಿ ಮತ್ತು ಇತರ ವ್ಯಾಪಾರ ಮಳಿಗೆದಾರರು ಕಾಲ್ನಡಿಗೆ ಪ್ರದೇಶವನ್ನು ಕಬಳಿಸಿಕೊಂಡು ತಮ್ಮ ವ್ಯವಹಾರ ಕೇಂದ್ರ ವಿಸ್ತರಿಸಿಕೊಂಡಿದ್ದಾರೆ. ಜಲ್ಲಿ, ಕಲ್ಲು, ಕಬ್ಬಿಣ ತಂದು ಹಾಕಿಕೊಂಡಿರುವುದೂ ಇದೆ. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗಿದ್ದು, ಇದನ್ನು ತೆರವುಗೊಳಿಸಬೇಕು. ಈ ಬಗ್ಗೆ ನಮ್ಮ ದೂರು ಇದ್ದರೂ ಪಂಚಾಯತ್, ಕಂದಾಯ, ಲೋಕೋಪಯೋಗಿ ಇಲಾಖೆಗಳು ಜವಾಬ್ಧಾರಿ ತೆಗೆದುಕೊಳ್ಳದೆ ಪರಸ್ಪರ ಕೈ ತೋರಿಸುತ್ತಿದ್ದು, ಜಾರಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ವೇಣೂರು ಎಪಿಎಂಸಿ ಯಾರ್ಡ್ ವಾಣಿಜ್ಯ ಉದ್ಧೇಶಕ್ಕೆ ಬಳಸಿದ ಪಂಚಾಯತ್ ವೇಣೂರಿನಲ್ಲಿ ಎಪಿಎಂಸಿ ವತಿಯಿಂದ ಬಹುಮೊತ್ತದಲ್ಲಿ ಸಂತೆಮಾರುಕಟ್ಟೆ ನಿರ್ಮಿಸಿ ಪಂಚಾಯತ್‌ಗೆ ಹಸ್ತಾಂತರಿಸಿದ್ದು, ಅದನ್ನು ರೈತಾಪಿವರ್ಗದ ಜನರಿಗೆ ಉಚಿತವಾಗಿ ಪ್ರಯೋಜನಕ್ಕೆ ಮುಕ್ತಗೊಳಿಸಬೇಕಾಗಿದ್ದು ಪಂಚಾಯತ್, ಇದೀಗ ಖಾಸಗಿ 6 ವಾಣಿಜ್ಯ ಸಂಕೀರ್ಣಗಳಾಗಿ ಬದಲಾಯಿಸಿಕೊಂಡು 3 ಲಕ್ಷ ಡೆಪೋಸಿಟ್,18900 ಮಾಸಿಕ ಬಾಡಿಗೆಯಂತೆ ನೀಡುತ್ತಿದೆ. ಇದು ರೈತರಿಗೆ ಇರುವ ಸೌಲಭ್ಯವಾಗಿದ್ದು, ಅದನ್ನು ಅವರಿಗೆ ದೊರೆಯದಂತೆ ಮಾಡಿರುವ ಪಂಚಾಯತ್ ಆಡಳಿತದ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅನೂಪ್ ಜೆ ಪಾಯಿಸ್ ಅವರು ಲಿಖಿತ ದೂರು ನೀಡಿದರು. ಇಲ್ಲಿ ನಡೆಯಬೇಕಾಗಿದ್ದ ಸಂತೆ ಚಟುವಟಿಕೆಯನ್ನು ವೇಣೂರು ಕೆಳಗಿನ ಪೇಟೆಯಲ್ಲಿ ನಡೆಸುತ್ತಿದ್ದು, ಎಪಿಎಂಸಿ ನಿಯಮಾವಳಿಯಂತೆ ಶೀಘ್ರದಲ್ಲೇ ಈ ವಾಣಿಜ್ಯ ಮಳಿಗೆಯನ್ನು ಮುಟ್ಟುಗೋಲು ಹಾಕಿಕೊಂಡು ಸಂತೆಮಾರುಕಟ್ಟೆಯನ್ನು ಇಲ್ಲಿ ನಡೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇನ್ನೊಂದು ದೂರಿನಲ್ಲಿ ವಸತಿ ಯೋಜನೆಯ ಹೆಸರಿನಲ್ಲಿ ಉದ್ಯೋಗ ಖಾತರಿಯಲ್ಲಿ ನಡೆಯಬೇಕಾಗಿದ್ದ ಕಾಮಗಾರಿ ಜಾಗದಲ್ಲಿ ಬೋರ್ಡ್ ಅಳವಡಿಸಲು ಫಲಾನುಭವಿಯಿಂದಲೇ ತಲಾ ೧ ಸಾವಿರ ರೂ. ಅಕ್ರಮವಾಗಿ ಪಡೆದುಕೊಳ್ಳಲಾಗಿದ್ದು, ಅದನ್ನು ಹಿಂದಿರುಗಿಸಿ ಈ ಸಂಬಂಧ ಪಂ. ಅಧ್ಯಕ್ಷೆ ಮೋಹಿನಿ ವಿ ಶೆಟ್ಟಿ ಮತ್ತು ಪಿಡಿಒ ಕೆ. ವೆಂಕಟಕೃಷ್ಣರಾಜ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಮನವಿ ಸಲ್ಲಿಸಿದರು.
ಮುಗಿಯದ ಕೊಲ್ಲಿ ಅಂಗನವಾಡಿ ಕೇಂದ್ರದ ದೂರು:
ಕೊಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಾಗದ ರೆಕಾರ್ಡ್ ಮಾಡಿಸುವ ಬಗ್ಗೆ ಮಕ್ಕಳ ಪೋಷಕರಿಂದ ದುಡ್ಡು ಸಂಗ್ರಹಿಸಿ ಇನ್ನೂ ರೆಕಾರ್ಡ್ ಕೆಲಸ ಮಾಡಿಸಿಲ್ಲ. ೬ ತಿಂಗಳು ಮಕ್ಕಳು ಹಾಜರಾತಿ ಇಲ್ಲದಿದ್ದರೂ ಅವರ ಸಹಿ ಹಾಕಿ ಆಹಾರ ಸಾಮಾಗ್ರಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಖಚಿತಪಟ್ಟಿದ್ದು, ಇಲಾಖೆ ಅದರ ಮೊತ್ತವನ್ನು ಕಾರ್ಯಕರ್ತೆಯಿಂದ ಕಟ್ಟಿಸಿಕೊಂಡು ಆರೋಪ ಸಾಬೀತಾಗಿದೆ. ಆದರೂ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಂಡಿಲ್ಲ, ಚಾರ್ಮಾಡಿಯ ಫಲಾನುಭವಿಗೆ ಕೊಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮಾತೃಪೂರ್ಣ ಸೌಲಭ್ಯ ನೀಡಿದ್ದು, ಇದರ ಹೆಚ್ಚುವರಿ ಮೊತ್ತವನ್ನೂ ಇಲಾಖೆ ಕಾರ್ಯಕರ್ತೆಯಿಂದ ಕಟ್ಟಿಸಿಕೊಂಡಿದೆ. ತಪ್ಪು ಎಸಗಿದ ಬಗ್ಗೆ ಕಾರ್ಯಕರ್ತೆ ಒಪ್ಪಿಕೊಂಡಿದ್ದು, ಕ್ರಮ ಆಗಿಲ್ಲ, ಫಲಾನುಭವಿ ನಕಲಿ ಸಹಿ ಪಡೆದು ಪೌಷ್ಠಿಕ ಆಹಾರದಲ್ಲೂ ವಂಚನೆ ಮಾಡಲಾಗಿದೆ ಎಂದು ಸುರೇಂದ್ರ ಕೊಲ್ಲಿ ದೂರು ನೀಡಿದರು.
ಪಂಚಾಯತ್ ಕೇಂದ್ರದಲ್ಲಿ ಆಧಾರ್ ಕೇಂದ್ರ ತೆರೆಯಲು ಮನವಿ:
ಪ್ರತೀ ಪಂಚಾಯತ್‌ಗಳಲ್ಲಿ ಆಧಾರ್ ತಿದ್ದುಪಡಿ, ನೊಂದಾವಣೆ ಕೇಂದ್ರ ತೆರೆದು ಜನರಿಗೆ ಪ್ರಾಥಮಿಕ ಎಲ್ಲಾ ಸೇವೆಗಳು ಲಭ್ಯವಾಗುವಂತೆ ಮಾಡಬೇಕು. ಇಲ್ಲದಿದ್ದರೆ ಅತೀ ಸಣ್ಣ ಕೆಲಸಗಳಿಗೂ ಜನ ತಾಲೂಕು ಕೇಂದ್ರಕ್ಕೆ ಬಂದು ತೊಂದರೆಗೊಳಗಾಗುತ್ತಿದ್ದಾರೆ. ಸರಕಾರಿ ಇಲಾಖೆಗಳಲ್ಲಿ ತೀವ್ರ ಸಿಬ್ಬಂದಿ ಕೊರತೆ ಇದ್ದು, ಇದನ್ನೂ ಭರ್ತಿಗೊಳಿಸಿ ಜನರಿಗೆ ನೆರವಾಗಬೇಕು ಎಂದು ಸಾರ್ವಜನಿಕ ಹಿತಾಸಕ್ತಿಯಿಂದ ಶಿಬಾಜೆ ಗ್ರಾಮದ ನಾಗರಿಕ ಹಿತರಕ್ಷಣೆ ವೇದಿಕೆ ಸಂಚಾಲಕ ಜಯರಾಮ ಗೌಡ ಅಹವಾಲು ಮಂಡಿಸಿದರು.
ಪ್ರತ್ಯೇಕ ಮಹಿಳಾ ದೌರ್ಜನ್ಯ ತಡೆ ಮೀಟಿಂಗ್ ನಡೆಸಲು ಮನವಿ ನೀಡಿದರೂ ಮೀಟಿಂಗ್ ನಡೆಸಿಲ್ಲ, ಪಿಎಮ್‌ಇಜಿಪಿ ಯಡಿ ೧೦ ಲಕ್ಷ ರೂ. ಸಾಲ ಮಂಜೂರಾದರೂ ಇಲಾಖೆಗಳು ನೀಡಿಲ್ಲ, ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯೊಬ್ಬರು ಜಾತಿ ನಿಂದನೆ ಮಾಡಿದ್ದಾರೆ, ಎಸ್‌ಬಿಐ ಬೆಳ್ತಂಗಡಿ ಸಿಬ್ಬಂದಿಯೊಬ್ಬರಿಂದ ಜನತೆಗೆ ತೊಂದರೆಯಾಗುತ್ತಿದ್ದು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶಿವಪ್ಪ ರೆಂಕೆದಗುತ್ತು ದೂರು ನೀಡಿದರು. ಅಳದಂಗಡಿಯ ಹರೀಶ್ಚಂದ್ರ ತಾಮ್ಹನ್‌ಕರ್ ದೂರು ನೀಡಿ, ನನ್ನ ಅಣ್ಣನಿಗೆ ದಾನಶಾಸನವಾಗಿ ನಾನು ನೀಡಿದ ೫೮ ಸೆಂಟ್ಸ್ ಜಾಗ ಅವರಿಗೆ ಆರ್‌ಟಿಸಿ ಆಗಿದ್ದು, ನನ್ನಿಂದ ವಿರಹಿತವಾಗಿಲ್ಲ. ಈಗ ನಾವಿಬ್ಬರೂ ತೀರ್ವೆ ಕಟ್ಟುವಂತಾಗಿದ್ದು ಅದನ್ನು ಸರಿಪಡಿಸಬೇಕು. ನನ್ನ ಪಟ್ಟಾ ಜಾಗಕ್ಕೆ ಕಂದಾಯ ಇಲಾಖೆಯಲ್ಲಿ ನಕಲಿ ಮ್ಯುಟೇಶನ್ ಆಗಿದ್ದು, ಈ ಬಗ್ಗೆ ಕಂದಾಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದರು.
ಸಭೆಯಲ್ಲಿ ಲೋಕಾಯುಕ್ತ ಉಪಾಧೀಕ್ಷಕ ವಿಜಯಪ್ರಸಾದ್ ಮತ್ತು ಕಲಾವತಿ, ಇನ್ಸ್‌ಪೆಕ್ಟರ್ ಭಾರತಿ, ಸಿಬ್ಬಂದಿಗಳಾದ ಪ್ರದೀಪ್, ಶಶಿಧರ, ಸುರೇಂದ್ರ, ಲೋಕೇಶ್, ರಾಧೇಶ್ ಉಪಸ್ಥಿತರಿದ್ದರು.
ತಾಲೂಕು ಎಲ್ಲಾ ಅಧಿಕಾರಿಗಳು ಹಾಜರು:
ಲೋಕಾಯುಕ್ತ ಕುಂದು ಕೊರತೆ ಬಗ್ಗೆ ಎಲ್ಲ್ಲಾ ಇಲಾಖೆಯ ಮುಖ್ಯ ಅಧಿಕಾರಿಗಳು ಹಾಜರಿರುವಂತೆ ಸೂಚಿಸಲಾಗಿದ್ದ ಹಿನ್ನೆಲೆಯಲ್ಲಿ ಎಲ್ಲ್ಲಾ ಅಧಿಕಾರಿಗಳೂ ಉಪಸ್ಥಿತರಿದ್ದರು. ಕೆಲವು ಅರ್ಜಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಮೂಲಕ ಸ್ಥಳದಲ್ಲೇ ಪರಿಹಾರ ನೀಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.