HomePage_Banner_
HomePage_Banner_
HomePage_Banner_

ಮಕ್ಕಳ ತಜ್ಞರ `ಧನ್ಯತಾ ಕ್ಷಿನಿಕ್’ ಉದ್ಘಾಟನೆ

Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ನಗರದ ಮಿನಿ ವಿಧಾನ ಸೌಧದ ಹತ್ತಿರದ ಮಂಜು ಭಾರತಿ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಮಕ್ಕಳ ತಜ್ಞರ `ಧನ್ಯತಾ ಕ್ಲಿನಿಕ್’ನ್ನು ಬೆಳ್ತಂಗಡಿ ರಾಘವೇಂದ್ರ ಕ್ಲಿನಿಕ್‌ನ ಡಾ| ಜಗನ್ನಾಥ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನ ಪರಿಷತ್ ಶಾಸಕ ಕೆ. ಹರೀಶ್‌ಕುಮಾರ್, ಶಾಸಕರಾದ ಹರೀಶ್ ಪೂಂಜ, ಮಾಜಿ ಶಾಸಕ ಪ್ರಭಾಕರ ಬಂಗೇರ, ಉದ್ಯಮಿ ರಮಾನಂದ ಸಾಲ್ಯಾನ್, ಕಟ್ಟಡ ಮಾಲಕ ಪಾಂಡುರಂಗ ಬಾಳಿಗಾ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ, ಜಿ.ಪಂ ಮಾಜಿ ಸದಸ್ಯ ಇಚ್ಚಿಲ ಸುಂದರ ಗೌಡ, ಶ್ರಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಜಿ.ಪಂ ಮಾಜಿ ಸದಸ್ಯ ರಾಜಶೇಖರ ಅಜ್ರಿ, ಯುವ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್, ಸ.ಕ ಇಂಜಿನಿಯರ್ ಶಿವಪ್ರಸಾದ ಅಜಿಲ, ಸಹಾಯಕ ಇಂಜಿನಿಯರ್ ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ರಮೇಶ್ ಪೂಜಾರಿ ಹಾಗೂ ಮಕ್ಕಳ ತಜ್ಞೆ ಡಾ| ಪ್ರತ್ಯೂಷ ಆಗಮಿಸಿದ ಅತಿಥಿಗಣ್ಯರನ್ನು ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಲಕ್ಷ್ಮಣ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.