HomePage_Banner_
HomePage_Banner_
HomePage_Banner_

ತುಳು ಲಿಪಿ ಶಿಕ್ಷಕ ಬಿ.ತಮ್ಮಯ್ಯ ನಿಧನ

Advt_NewsUnder_1

ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷ ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಬಯಲು ಬೋವಿನಡಿ ವಾಸಿ ಬಿ.ತಮ್ಮಯ್ಯ(71.ವ) ಇಂದು (ಸೆ.10) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು.
ತುಳು ಲಿಪಿಯನ್ನು ಶಾಲೆಗಳಲ್ಲಿ ಕಲಿಸುವ ಮೂಲಕ ಜನಪ್ರಿಯರಾಗಿದ್ದ ಇವರು ತುಳು ಭಾಷಾ ಆಸಕ್ತರಿಗಾಗಿ ತುಳು ಲಿಪಿ ಕಲ್ಪುಲೆ ಎಂಬ ಪುಸ್ತಕವನ್ನು ಹೊರತಂದು ಅವರು ತುಳು ಲಿಪಿ ಶಿಕ್ಷಕನಾಗಿ ಅದೆಷ್ಟೊ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ತುಳಿ ಲಿಪಿಯನ್ನು ಕಲಿಸಿದ್ದಾರೆ. ಈ ವಿಶೇಷ ಸಾಧನೆಯನ್ನು ಗುರುತಿಸಿ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಚಾವಡಿ ತಮ್ಮನ ನೀಡಿ ಸನ್ಮಾನಿಸಲಾಗಿದೆ.
ಬಂಟ್ವಾಳ ಸರಕಾರಿ ನೌಕರರ ಸಂಘದ ಕಟ್ಟಡ ಸಮಿತಿಯ ಉಪಾಧ್ಯಕ್ಷರಾಗಿ,ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟದ ಸಮಿತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ ಇಂದುಮತಿ, ಪುತ್ರ ನಿಶಾಂತ್ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.