ವಳಂಬ್ರ: ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರವಲ್ಲದೆ ಜಿಲ್ಲೆಯಲ್ಲೇ ಹೆಸರುವಾಸಿಯಾಗಿರುವ ಮನೆತನವಾದ, ಕಡಿರುದ್ಯಾವರ ಗ್ರಾಮದ “ವಳಂಬ್ರ” ಮನೆಯ ದಿ. ಎಲ್ಯಣ್ಣ ಗೌಡರ ಪತ್ನಿ ಗೌರೀದೇವಿ ವಳಂಬ್ರ(90ವ.) ಅವರು ವಯೋಸಹಜ ಅನಾರೋಗ್ಯದಿಂದ ಸೆ. 9 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ತಾಲೂಕಿನ ಹಿರಿಯ ಕೃಷಿಕ ಕುಟುಂಬದಲ್ಲಿ ಆದರ್ಶ ಗೃಹಿಣಿಯಾಗಿದ್ದ ಗೌರೀದೇವಿ ಅವರು ಮನೆತನದ ಗೌರವದಂತೆ ಅದೆಷ್ಟೋ ಮಂದಿಗೆ ಅನ್ನದಾನ, ವಿದ್ಯಾದಾನದಂತಹಾ ಕೈಂಕರ್ಯದಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದರು. ಕೆಲ ಸಮಯದಿಂದ ಅನಾರೋಗ್ಯದಿಂದ ಅವರು ಪೂರಕ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರ ಮೂರು ಮಂದಿ ಮಕ್ಕಳ ಪೈಕಿ ಬೆಳ್ತಂಗಡಿ ತಾ.ಪಂ ಅಧ್ಯಕ್ಷರಾಗಿದ್ದ ವಳಂಬ್ರ ನಾರಾಯಣ ಗೌಡರು ಕೆಲವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಇದೀಗ ಅವರು ಪುತ್ರರಾದ ವಿನಯಚಂದ್ರ ಗೌಡ ಮತ್ತು ಶ್ರೀನಿವಾಸ ಗೌಡ, ಏಕೈಕ ಪುತ್ರಿ ವಾರಿಜಾ ಮುಂಡೋಡಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಕಾರ್ಯಗಳು ಸೆ. 10 ರಂದು ನಡೆಯಲಿದೆ ಎಂದು ಕುಟುಂಬವರ್ಗದವರು ತಿಳಿಸಿದ್ದಾರೆ.