ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ಕುರಿತು ಭಾಷಣ ಸ್ಪರ್ಧೆ

Advt_NewsUnder_1
Advt_NewsUnder_1
Advt_NewsUnder_1
ಸಾಂದರ್ಭಿಕ ಚಿತ್ರ 

ನೆಹರು ಯುವ ಕೇಂದ್ರ ವತಿಯಿಂದ ದೇಶದೆಲ್ಲೆಡೆ ಸಂವಿಧಾನ ದಿವಸ ಆಚರಿಸುತ್ತಿರುವ ಸಂದರ್ಭ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ಕುರಿತ ಭಾಷಣ ಸ್ಪರ್ಧೆ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗಿದೆ. ಭಾಷಣ ಸ್ಪರ್ಧೆಯು ಹಿಂದಿ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಇರಲಿದ್ದು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜೇತರುಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಿದೆ.
ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ಸೆ.೧೪ ರಂದು ಬೆಳ್ತಂಗಡಿ ತಾಲೂಕು ಕೇಂದ್ರಗಳಲ್ಲಿ ಸಂಘಟಿಸುತ್ತಿದ್ದು ಇದನ್ನು ಎಸ್.ಡಿ.ಎಮ್ ಡಿಗ್ರಿ ಕಾಲೇಜು ಉಜಿರೆಯಲ್ಲಿ ನಡೆಸಲಾಗುತ್ತದೆ. ಇಲ್ಲಿಂದ ಆಯ್ಕೆಗೊಂಡ ಮೂರು ಯುವಜನರು ಸೆ.೨೧ರಂದು ಬೆಳ್ಳಿಗೆ 10.30  ಗಂಟೆಗೆ ವಿಶ್ವವಿದ್ಯಾನಿಲಯ ಕಾಲೇಜು ಸಭಾಂಗಣದಲ್ಲಿ ಜರುಗುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಆಯ್ಕೆಯಾದವರು ರಾಜ್ಯ ಮಟ್ಟಕ್ಕೆ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಆಯ್ಕೆಯಾದರು ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಅವಕಾಶ ಸಿಗುವುದು.
ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಚಿಸುವ ಬೆಳ್ತಂಗಡಿ ತಾಲೂಕಿನ ಆಸಕ್ತ 18-29 ವಯೋಮಿತಿಯ ಯುವಜನರು ಹೆಚ್ಚಿನ ಮಾಹಿತಿಗಾಗಿ ಈ ನಂಬರನ್ನು ಸಂಪರ್ಕಿಸುವುದು. 8971071342

          

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.