ಹಿಂದೂ ಯುವಶಕ್ತಿ ವಾಟ್ಸ್ಯಾಪ್ ಗ್ರೂಪಿನಿಂದ ಮನೆ ಹಸ್ತಾಂತರ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸುಮಾರು 250 ಮಂದಿ ಸದಸ್ಯರಿರುವ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ವಾಟ್ಸ್ಯಾಪ್ ಗ್ರೂಪ್ ಆಸರೆ-2 ಎಂಬ ಯೋಜನೆಯಡಿ ಬಡ ಕುಟುಂಬಕ್ಕೆ ಮನೆಯೊಂದನ್ನು ನಿರ್ಮಿಸಿದ್ದು ಮನೆಯ ಕುಟುಂಬದ ಸದಸ್ಯರಿಗೆ ಕೀಲಿ ಕೈ ನೀಡುವ ಮೂಲಕ ಮನೆ ಹಸ್ತಾಂತರಿಸಿದೆ.
ಹಿಂದೂ ಯುವಶಕ್ತಿ ಆಲಡ್ಕ ವಾಟ್ಸ್ಯಾಪ್ ಗ್ರೂಪ್ ಕಳೆದ ಮೂರು ವರ್ಷಗಳಲ್ಲಿ ತಂಡದ ಸದಸ್ಯರು 19  ಸೇವಾ ಯೋಜನೆಗೆ 8,11,800ರೂ.ಗಳನ್ನು ಸಂಗ್ರಹಿಸಿ ಸಹೃದಯಿಗಳ ನೆರವಿನಿಂದ ಮಾದರಿ ಕೆಲಸ ಮಾಡುತ್ತಿದೆ. ಈ ಮೊದಲು ಸೇವಾ ಯೋಜನೆಯಾಗಿ ಆಸರೆ-1  ಮನೆಯನ್ನು ನೀಡಿ ಪ್ರಶಂಸೆಗೆ ಭಾಜನವಾಗಿತ್ತು. ಇದೀಗ ಇಪ್ಪತ್ತನೆಯ ಸೇವಾ ಯೋಜನೆಯಾಗಿ ಆಸರೆ-೨ನ್ನು ಬೆಳ್ತಂಗಡಿ ಮೇಲಂತಬೆಟ್ಟುವಿನ ಸುಜಾತ ಎಂಬವರಿಗೆ ಮನೆ ನಿರ್ಮಿಸಿ ಕೊಟ್ಟಿದೆ.

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೆಸರ ಶಿವಪ್ರಸಾದ್ ಅಜಿಲ ಆಸರೆ ಮನೆಯ ಕೀಲಿ ಕೈಯನ್ನು ಹಸ್ತಾಂತರಿಸಿ ಮಾತನಾಡುತ್ತಾ ಮನೆ ನಿರ್ಮಿಸುವ ಮೂಲಕ ಮತ್ತು ಸಮಾಜದಲ್ಲಿನ ಕಟ್ಟಕಡೆಯ ಕುಟುಂಬಗಳು ಎಲ್ಲರಂತೆ ಜೀವಿಸಬೇಕು ಎಂಬ ಸೇವೆ ಯೋಜನೆಗಳಿಗೆ ಬೆಲೆ ಕಟ್ಟಲು ಅಸಾಧ್ಯ ಎಂದರು. ಪತ್ರಕರ್ತ ಮನೋಹರ್ ಬಳಂಜ ಮಾತನಾಡಿ ತಮ್ಮ ದುಡಿಮೆಯ ಒಂದಷ್ಟು ಸಮಯವನ್ನು ಹಾಗೂ ದುಡಿಮೆಯ ಒಂದಷ್ಟು ಹಣವನ್ನು ಸಮಾಜದ ಅಭಿವೃದ್ಧಿಗಾಗಿ ವಿನಿಯೋಗಿಸಿರುವುದು ಅಭಿನಂದನೀಯ ಎಂದರು.
ಈ ಸಂದರ್ಭದಲ್ಲಿ ಸಂಘಟನೆಗೆ ಪ್ರೋತ್ಸಾಹ ನೀಡುತ್ತಿರುವ ಹೊನ್ನಯ್ಯ ವೇಣೂರು ಇವರನ್ನು ಅಭಿನಂದಿಸಲಾಯಿತು. ಜೊತೆಗೆ ಮನೆ ನಿರ್ಮಾಣಕ್ಕೆ ಸಹಕರಿಸಿದ ಸಂಘಟನೆಯ ಸದಸ್ಯರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಭಾಸ್ಕರ ಗುರುಸ್ವಾಮಿ ಗುರುವಾಯನಕೆರೆ, ಸಂಘಟನೆಯ ಅಧ್ಯಕ್ಷ ಸಂತೋಷ್ ಪೆರಲ್ದಾರಕಟ್ಟೆ, ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್.ಜಿ ಹುಣ್ಸೇಕಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಹಿಂದೂ ಯುವಶಕ್ತಿ ಸಂಘಟನೆ ಸಂಚಾಲಕ ದೇವದಾಸ್ ಕಾಪಿನಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.