ಮುಂಡಾಜೆ ಐತ್ತಪ್ಪ ಶೆಟ್ಟಿ ನಿಧನ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ : ಇಲ್ಲಿಯ ಮುಂಡಾಜೆ ಗ್ರಾಮದ ಸೋಮಂತ್ತಡ್ಕ ನಿವಾಸಿ ಐತ್ತಪ್ಪಶೆಟ್ಟಿ(78.ವ) ಅಲ್ಪಕಾಲದ ಅಸೌಖ್ಯದಿಂದ  ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಇಂದು(ಸೆ.7) ನಿಧನರಾದರು.
ಇವರು ಪ್ರಾರಂಭದಲ್ಲಿ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಂತರ ಮುಂಡಾಜೆ ಪ್ರೌಢಶಾಲೆಯಲ್ಲಿ ಜವಾನರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ವಸಂತಿ, ಪುತ್ರ ರವಿಪ್ರಸಾದ್, ಮೂವರು  ಪುತ್ರಿಯರಾದ ತನುಜ, ಉಷಾ, ರೋಹಿಣಿ, ಕುಟುಂಬಸ್ಥರು, ಹಾಗೂ  ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಮನೆಗೆ ಮುಂಡಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ, ಮುಂಡ್ರುಪಾಡಿ ವಿಶ್ವನಾಥ ಶೆಟ್ಟಿ, ಹೊಸಗದ್ದೆ ಬಾಲಕೃಷ್ಣ ಶೆಟ್ಟಿ, ಸಿವಿಲ್ ಗುತ್ತಿಗೆದಾರ ಕೃಷ್ಣ ಕುಮಾರ್ ಅಗರಿ, ತ್ಯಾಂಪಣ್ಣ ಶೆಟ್ಟಿ, ಮುಂಡಾಜೆ ವಿದ್ಯಾ ಸಂಸ್ಥೆಯ ಶಿಕ್ಷಕ ವೃಂದದವರು, ಹಾಗೂ ಊರಿನ ಅನೇಕ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.