ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅರಸಿನಮಕ್ಕಿ: ಇಲ್ಲಿನ ಅಡ್ಕಾಡಿ ನಿವಾಸಿ, ಜನತಾದಳ ಜಾತ್ಯತೀತ ಪಕ್ಷದ ಜಿಲ್ಲಾ ಉಪಾಧ್ಯಕ್ಷ, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ, ಸಂಘಟಕ, ಅರಸಿನಮಕ್ಕಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ ಅವರು ಸೆ. 4 ರಂದು ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.
ಆಗಸ್ಟ್ ಕೊನೆಯ ವಾರದಲ್ಲಿ ಸಾಮಾಜಿಕ ಕಾರ್ಯದ ಉದ್ಧೇಶಕ್ಕಾಗಿ ಬೆಂಗಳೂರು ಪ್ರಯಾಣ ಕೈಗೊಂಡಿದ್ದ ಅವರು ಅಲ್ಲಿಂದ ಮರಳಿದ್ದರು. ಸೆ. 1  ರಂದು ತಮ್ಮ ಗ್ರಾ.ಪಂ ವ್ಯಾಪ್ತಿಯ ಬಾಣಂತಿ ಮತ್ತು ಮಗು ಸಾವಿನ ವಿಚಾರ ತಿಳಿದು ಈ ವಿಚಾರವಾಗಿ ಅತ್ತಿತ್ತ ವಿಶ್ರಾಂತಿ ಇಲ್ಲದೆ ಓಡಾಡಿದ್ದರು. ಮಧುಮೇಹ ಮತ್ತು ಇತರೇ ಅನಾರೋಗ್ಯದಿಂದಿದ್ದ ಅವರಿಗೆ ಇದ್ದಕ್ಕಿದ್ದಂತೆ ಕೈ ಸೆಳೆತ ಪ್ರಾರಂಭಗೊಂಡಿತ್ತು. ಈ ಸಂಬಂಧ ಅವರು ಅರಸಿನಮಕ್ಕಿ ಖಾಸಗಿ ವೈದ್ಯರ ಬಳಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದರು. ಆ. 3 ರಂದು ಹೆಚ್ಚುವರಿಯಾಗಿ ಉಜಿರೆಯ ಖಾಸಗಿ ಆಸ್ಪತ್ರೆಗೆ ಬಂದು ಇಸಿಜಿ ಮತ್ತು ಆರೋಗ್ಯ ತಪಾಸಣೆ ನಡೆಸಿಕೊಂಡಿದ್ದರು. ಸಂಜೆ ಮನೆಗೆ ಮರಳಿದವರಿಗೆ ಮಧ್ಯರಾತ್ರಿ ತೀವ್ರ ಕೈ ಸೆಳೆತ, ಹೊಟ್ಟೆಯೊಳಗೆ ತಳಮಳ ಪ್ರಾರಂಭವಾದ ಹಿನ್ನೆಲೆಯಲ್ಲಿ ಆಂಬುಲೆನ್ಸ್ ತರಿಸಿ
ಉಜಿರೆ ಖಾಸಗಿ ಆಸ್ಪತ್ರೆ ಮತ್ತು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅದಾಗಲೇ ತೀವ್ರ ಅಸ್ವಸ್ಥರಾಗಿದ್ದ ಅವರು ಕೊನೆಯುಸಿರೆಳೆದಿದ್ದರು.
ಅಡ್ಕಾಡಿ ಮನೆ ದಿ. ರಾಮಯ್ಯ ಗೌಡ ಮತ್ತು ಯಮುನಾ ದಂಪತಿ ಪುತ್ರರಾಗಿರುವ ಜಗನ್ನಾಥ ಗೌಡ ಪ್ರಾರಂಭದಿಂದಲೂ ಜನತಾದಳ ಜಾತ್ಯತೀತ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದೇ ಪಕ್ಷವನ್ನು ಪ್ರತಿನಿಧಿಸಿ ಅವರ ಬೆಂಬಲಿತರ ತಂಡ ಕಟ್ಟಿಕೊಂಡು ಕಳೆದ 2 ಅವಧಿಯಿಂದ ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರು. ಅವರ ಈ ಅವಧಿಯಲ್ಲಿ ಶಿಶಿಲ, ರೆಖ್ಯ ಮತ್ತು ಶಿಬಾಜೆಯಲ್ಲಿ ಶಾಖೆ ತೆರೆಯುವಂತೆ ಮಾಡಿ ಅವುಗಳಿಗೆ ಸ್ವಂತ ಕಟ್ಟಡ ಕೂಡ ರಚನೆಗೆ ಕಾರಣಕರ್ತರಾಗಿದ್ದರು. ಅರಸಿನಮಕ್ಕಿ ಗ್ರಾ.ಪಂ ನಲ್ಲಿ ಒಂದು ಪೂರ್ಣ ಅವಧಿಗೆ ಅಧ್ಯಕ್ಷರಾಗಿ, ಇನ್ನೊಂದು ಅರ್ಧ ಅವಧಿಗೆ ಅಧ್ಯಕ್ಷರಾಗಿ, ಪ್ರಸ್ತುತ ಪೂರ್ಣ ಅವಧಿಗೆ ಉಪಾಧ್ಯಕ್ಷರಾಗಿದ್ದರು. ಜನತಾದಳ ಜಾತ್ಯತೀತ ಪಕ್ಷದ ಕಟ್ಟಾಳುವಾಗಿದ್ದ ಅವರು ತಾಲೂಕಿನ ಇತರ ಭಾಗಗಳಲ್ಲಿ ಜೆಡಿಎಸ್ ಶಕ್ತಿಕಳೆದುಕೊಂಡಿದ್ದರೂ ಅವರ ಗ್ರಾಮಾಂತರ ಭಾಗದಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸಿದ್ದರು ಅರಸಿನಮಕ್ಕಿ ಪಂಚಾಯತ್ ಅನ್ನು ಅಧಿಕಾರಕ್ಕೆ ತಂದಿದ್ದರು, ತಮ್ಮ ಪಕ್ಷ ಅಧಿಕಾರದಲ್ಲಿದ್ದರೂ ಇಲ್ಲದ್ದಿದ್ದರೂ ತಮ್ಮ ಪ್ರದೇಶದ ಅಭುವೃದ್ಧಿಗೆ ಸದಾ ಶ್ರಮಿಸುತ್ತಿದ್ದರು. ಜೆಡಿಎಸ್ ವರಿಷ್ಟರಾಗಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಹೆಚ್ ರೇವಣ್ಣ ಅವರ ಜೊತೆ ನಿಕಟ ಸಂಪರ್ಕಹೊಂದಿದ್ದ ಅವರು ಅನೇಕ ಸಂದರ್ಭಗಳಲ್ಲಿ ಅವರನ್ನು ನೇರ ಸಂಪರ್ಕಿಸಿ ಜನಪರವಾದ ತಮ್ಮ ಬೇಡಿಕೆಗಳನ್ನು ಮಂಜೂರುಮಾಡಿಸಿಕೊಂಡು ಬರುತ್ತಿದ್ದರು. ಪಕ್ಷದ ತಾ| ಅಧ್ಯಕ್ಷರಾಗಿದ್ದ ಅವರು ಇದೀಗ ಜಿಲ್ಲಾ ಉಪಾಧ್ಯಕ್ಷರಾಗಿದ್ದರು.
ಕುಂಟಾಲಪಲ್ಕೆ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ, ಬ್ರಹ್ಮ ಮುಗೆರ್ಕಳ ಕ್ಷೇತ್ರ ಕುಂಟಾಲಪಲ್ಕೆ ಮುದ್ದಿಗೆ ಇಲ್ಲಿನ ಅಧ್ಯಕ್ಷರಾಗಿ, ಅರಸಿನಮಕ್ಕಿಯಲ್ಲಿ ಅದ್ದೂರಿಯಾಗಿ ನಡೆದಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷರಾಗಿ, ಕುಂಟಾಲಪಲ್ಕೆ ಸರಕಾರಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸೇರಿದಂತೆ ಅನೇಕ ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದರು.
ಕ್ರೀಡೆ, ಕಲೆ, ಸಂಸ್ಕೃತಿ ವಿಚಾರವಾಗಿ ಮತ್ತು ಕಷ್ಟದಲ್ಲಿದ್ದು ತಮ್ಮ ಬಳಿ ಬರುತ್ತಿದ್ದವರಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸುತ್ತಿದ್ದರು.
ಮೃತರ ಮನೆಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ, ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್ ಕೊಟ್ಟಾರಿ, ಮಾಜಿ ಶಾಸಕ ವಸಂತ ಬಂಗೇರ, ಜೆಡಿಎಸ್ ತಾ. ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್,   ಪದಾಧಿಕಾರಿಗಳಾದ ರಾಮಆಚಾರಿ, ಎಚ್.ಎನ್ ನಾಗರಾಜ್, ಸೂರಜ್ ವಳಂಬ್ರ, ಸಿಂದೂದೇವಿ, ತುಂಗಪ್ಪ ಗೌಡ, ಪುನೀತ್ ಸುವರ್ಣ, ಚಂಚಲಾ ಕುಂದರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಿರಂಜನ ಭಾವಂತಬೆಟ್ಟು, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ,  ಪಂ.ಅ.ಅಧಿಕಾರಿ ವೆಂಕಪ್ಪ ಗೌಡ, ಮಾಜಿ ತಾ.ಪಂ ಸದಸ್ಯ  ವಾಮನ ತಾಮ್ಹನ್‌ಕರ್,  ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಚಂದನ್‌ಪ್ರಸಾದ್ ಕಾಮತ್, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಸೊಸೈಟಿ ಅಧ್ಯಕ್ಷರುಗಳಾದ ನಾರಾಯಣ ಗೌಡ ಕೊಕ್ಕಡ, ಧನಂಜಯ ಡ್ಲೆ, ಎನ್ ಲಕ್ಷ್ಮಣ ಗೌಡ ಬಂಗಾಡಿ, ಸುಂದರ ಗೌಡ ಇಚ್ಚಿಲ, ನ್ಯಾಯವಾದಿಗಳಾದ ಭಗೀರಥ ಜಿ, ಬಿ.ಎಮ್ ಭಟ್, ಶಿವಕುಮಾರ್, ಕಾಲಭೈರವೇಶ್ವರ ಒಕ್ಕಲಿಗ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ ಗೌಡ, ಸಿಇಒ ದಿನೇಶ್ ಗೌಡ, ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರ್, ದಾಮೋದರ ಗೌಡ ಸುರುಳಿ, ಭರತ್ ಕುಮಾರ್ ಬಂಗಾಡಿ ಮೊದಲಾದ ಗಣ್ಯರು ಆಗಮಿಸಿ ಅಂತಿಮದರ್ಶನ ಪಡೆದು ಸಂತಾಪ ಸೂಚಿಸಿದರು. ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಸಹಿತ ಇತರ ಗ್ರಾ.ಪಂ ಅಧ್ಯಕ್ಷರು, ಸದಸ್ಯರು-ಸಿಬ್ಬಂದಿಗಳು, ಹತ್ಯಡ್ಕ ಸಹಕಾರಿ ಸಂಘದ ಸಿ.ಇ.ಒ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ಸಹಿತ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರುಗಳು, ನಿರ್ದೇಶಕರು ಮತ್ತು ಸಿಬ್ಬಂದಿಗಳು ಭೇಟಿ ನೀಡಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಅಮರನಾಥ ಶೆಟ್ಟಿ ಮತ್ತು ದೆಹಲಿ ಪ್ರವಾಸದಲ್ಲಿರುವ ಮಾಜಿ ಸಚಿವ ಕೆ. ಗಂಗಾಧರ ಗೌಡ ಸಂತಾಪ ಸೂಚಿಸಿದ್ದಾರೆ. ಮೃತರು ತಾಯಿ ಯಮುನಾ, ಪತ್ನಿ, ಅಂಗನವಾಡಿ ಕಾರ್ಯಕರ್ತೆಯಾಗಿರುವ ಸತ್ಯಪ್ರಭಾ, ಸಹೋದರ ಧರ್ಮರಾಜ್ ಹಾಗೂ ಬಂಧುವರ್ಗದವನ್ನು ಅಗಲಿದ್ದಾರೆ. ಅರಸಿನಮಕ್ಕಿಯಲ್ಲಿ ಶಾಲಾ ಕಾಲೇಜು ಮತ್ತು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ನಡೆಸಿ ಜನ ಮೃತರ ಶೋಕಾದಲ್ಲಿ ಭಾಗಿಯಾದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.