ಅರಸಿನಮಕ್ಕಿ: ಇಲ್ಲಿಯ ಅರಸಿನಮಕ್ಕಿ ಗ್ರಾ.ಪಂ ಉಪಾಧ್ಯಕ್ಷ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರೂ ಆಗಿದ್ದ ಎ. ಜಗನ್ನಾಥ ಗೌಡರವರು ಹೃದಯಾಘಾತದಿಂದ ಸೆ.4 ರಂದು ನಿಧನರಾಗಿದ್ದು, ಇವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಗೋಪಾಲಕೃಷ್ಣ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಸೆ.5 ರಂದು ಜರುಗಿತು.
ಸಭೆಯಲ್ಲಿ ತಾ.ಪಂ ಮಾಜಿ ಸದಸ್ಯರಾದ ವಾಮನ ತಾಮ್ಹನ್ಕರ್, ಶಿಬಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ಎ.ಸಿ ಮ್ಯಾಥ್ಯೂ, ಹತ್ಯಡ್ಕ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಟಿ ಶೆಟ್ಟಿಗಾರ್, ಅರಸಿನಮಕ್ಕಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ವಿಜಯ ಕುಮಾರ್, ಅರಸಿನಮಕ್ಕಿ ಪ್ರೌಢಶಾಲಾ ಶಿಕ್ಷಕ ಲಕ್ಕಪ್ಪ, ಅರಸಿನಮಕ್ಕಿ ಗ್ರಾ.ಪಂ ಸದಸ್ಯ ಯು.ಸುಂದರ ಗೌಡ, ಹತ್ಯಡ್ಕ ಸಹಕಾರಿ ಸಂಘದ ಉಪಾಧ್ಯಕ್ಷ ಕೇಶವ ರಾವ್, ಎ.ಅಬ್ಬಾಸ್, ಧರ್ಣಪ್ಪ ಗೌಡ, ಮಾಯಿಲಪ್ಪ ಗೌಡ ಇವರುಗಳು ಅಗಲಿದ ಎ.ಜಗನ್ನಾಥ ಗೌಡ ಅಡ್ಕಾಡಿಯವರಿಗೆ ನುಡಿ ನಮನ ಸಲ್ಲಿಸಿದರು.