HomePage_Banner_
HomePage_Banner_

ಅಪಾಯದ ಮುನ್ಸೂಚನೆ ಗಂಟೆ ಬಾರಿಸುತ್ತಿರುವ ಕಜಕೆ ಶಾಲೆ

ಬೆಳ್ತಂಗಡಿ : 2016-17 ನೇ ಸಾಲಿನ ತಾಲೂಕಿನ ಉತ್ತಮ ಶಾಲೆ ಪ್ರಶಸ್ತಿ ಪಡೆದಿದ್ದ ಕಜಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಪಾಯದ ಮುನ್ಸೂಚನೆ ಗಂಟೆ ಬಾರಿಸುತ್ತಿದೆ. ತಾಲೂಕಿನ ಮಲವಂತಿಗೆ ಗ್ರಾಮದ ಕಜಕೆ ಸ.ಕಿ.ಪ್ರಾ ಶಾಲೆಗೆ ಅಂಟಿಕೊಂಡಿರುವ ಬಲಬದಿಯ ರಸ್ತೆಯು ಬಹುಪಾಲು ಕುಸಿದಿದ್ದು ಮಳೆಯ ಆರ್ಭಟ ಹೀಗೆ ಮುಂದುವರಿದರೆ ಶಾಲೆಯ ಸಂಪರ್ಕವೇ ಕಡಿತಗೊಳ್ಳಲಿದೆ. ಇದಲ್ಲದೆ ಕುಸಿತದ ತೀವ್ರತೆ ಹೆಚ್ಚಾದ್ದಲ್ಲಿ ಶಾಲೆಯನ್ನೂ ವ್ಯಾಪಿಸುವ ಭೀತಿಯನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಎದುರಿಸುತ್ತಿದ್ದಾರೆ. ಶಾಲೆಯಲ್ಲಿ ಸುಮಾರು 89 ರಷ್ಟು ವಿಧ್ಯಾರ್ಥಿಗಳಿದ್ದು ಕೆಲ ತಿಂಗಳ ಹಿಂದಷ್ಟೇ ನಿರ್ಮಿಸಲಾಗಿದ್ದ ಆಟದ ಮೈದಾನದಲ್ಲೂ ಕುಸಿತ ಉಂಟಾಗಿದೆ. ಈಗಾಗಲೇ ಬಿ.ಇ ಓ , ಸಿ.ಆರ್.ಪಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಮಳೆ ಮುಂದುವರಿಯುವ ಮುನ್ಸೂಚನೆ ಇರುವ ಕಾರಣ ಶೀಘ್ರದಲ್ಲೇ ತಡೆಗೋಡೆ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಲಿ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.
ನೆರೆಯ ಸಂದರ್ಭದಲ್ಲಿ ಕ್ಷೀಣಿಸಿದ್ದ ಶಾಲಾ ಹಾಜರಾತಿ ಕ್ರಮೇಣ ಚೇತರಿಸಿಕೊಳ್ಳುತ್ತಿದೆ. ಶಾಲೆ ಪಕ್ಕದ ರಸ್ತೆಯು ಕುಸಿದಿದ್ದು ಪೋಷಕರಲ್ಲಿ ಆತಂಕವುಂಟುಮಾಡಿದೆ. ಗ್ರಾಮಸ್ಥರು ತಡೆಗೋಡೆ ನಿರ್ಮಿಸಬೇಕೆಂದು ಒತ್ತಾಯಿಸುವುದರಿಂದ ಶೀಘ್ರವೇ ಕಾಮಗಾರಿ ಆರಂಭಗೊಂಡರೆ ಸಹಕಾರವಾಗಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.