HomePage_Banner_
HomePage_Banner_

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅರಸಿನಮಕ್ಕಿ: ಇಲ್ಲಿನ ಅಡ್ಕಾಡಿ ನಿವಾಸಿ, ಜನತಾದಳ ಜಾತ್ಯತೀತ ಪಕ್ಷದ ಜಿಲ್ಲಾ ಉಪಾಧ್ಯಕ್ಷ, ಹತ್ಯಡ್ಕ ಸಹಕಾರಿ ಸಂಘದ ಅಧ್ಯಕ್ಷ, ಸಂಘಟಕ, ಅರಸಿನಮಕ್ಕಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಉಪಾಧ್ಯಕ್ಷ ಅಡ್ಕಾಡಿ ಜಗನ್ನಾಥ ಗೌಡ ಅವರು ಸೆ. 4  ರಂದು ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.
ಮೃತರು ತಾಯಿ ಯಮುನಾ, ಪತ್ನಿ, ಅಂಗನವಾಡಿ ಕಾರ್ಯಕರ್ತೆಯಾಗಿರುವ ಸತ್ಯಪ್ರಭಾ, ಸಹೋದರ ಧರ್ಮರಾಜ್ ಹಾಗೂ ಬಂಧುವರ್ಗದವನ್ನು ಅಗಲಿದ್ದಾರೆ. ಮೃತರ ಮನೆಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ, ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್ ಕೊಟ್ಟಾರಿ, ಮಾಜಿ ಶಾಸಕ ವಸಂತ ಬಂಗೇರ, ಜೆಡಿಎಸ್ ತಾ. ಅಧ್ಯಕ್ಷ ಪ್ರವೀಣ್‌ಚಂದ್ರ ಜೈನ್, ಪದಾಧಿಕಾರಿಗಳಾದ ರಾಮಆಚಾರಿ, ಎಚ್.ಎನ್ ನಾಗರಾಜ್, ಸೂರಜ್ ವಳಂಬ್ರ, ಸಿಂದೂದೇವಿ, ತುಂಗಪ್ಪ ಗೌಡ, ಪುನೀತ್ ಸುವರ್ಣ, ಚಂಚಲಾ ಕುಂದರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಿರಂಜನ ಭಾವಂತಬೆಟ್ಟು, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ, ಧರ್ಮಸ್ಥಳ ಗ್ರಾ.ಪಂ ಅಧ್ಯಕ್ಷ ಚಂದನ್‌ಪ್ರಸಾದ್ ಕಾಮತ್, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಸೊಸೈಟಿ ಅಧ್ಯಕ್ಷರುಗಳಾದ ನಾರಾಯಣ ಗೌಡ ಕೊಕ್ಕಡ, ಧನಂಜಯ ಡ್ಲೆ, ಎನ್ ಲಕ್ಷ್ಮಣ ಗೌಡ ಬಂಗಾಡಿ, ಸುಂದರ ಗೌಡ ಇಚ್ಚಿಲ, ನ್ಯಾಯವಾದಿಗಳಾದ ಭಗೀರಥ ಜಿ, ಬಿ.ಎಮ್ ಭಟ್, ಶಿವಕುಮಾರ್, ಕಾಲಭೈರವೇಶ್ವರ ಒಕ್ಕಲಿಗ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ ಗೌಡ, ಸಿಇಒ ದಿನೇಶ್ ಗೌಡ, ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರ್, ದಾಮೋದರ ಗೌಡ ಸುರುಳಿ, ಭರತ್ ಕುಮಾರ್ ಬಂಗಾಡಿ ಮೊದಲಾದ ಗಣ್ಯರು ಆಗಮಿಸಿ ಅಂತಿಮದರ್ಶನ ಪಡೆದು ಸಂತಾಪ ಸೂಚಿಸಿದರು. ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಸಹಿತ ಇತರ ಗ್ರಾ.ಪಂ ಅಧ್ಯಕ್ಷರು, ಸದಸ್ಯರು-ಸಿಬ್ಬಂದಿಗಳು, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರುಗಳು, ನಿರ್ದೇಶಕರು ಮತ್ತು ಸಿಬ್ಬಂದಿಗಳು ಭೇಟಿ ನೀಡಿದರು.
ಅರಸಿನಮಕ್ಕಿಯಲ್ಲಿ ಶಾಲಾ ಕಾಲೇಜು ಮತ್ತು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ನಡೆಸಿ ಜನ ಮೃತರ ಶೋಕದಲ್ಲಿ  ಭಾಗಿಯಾದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.