ಡಿಕೆಶಿ ಬಂಧನ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಳ್ತಂಗಡಿ: ದೆಹಲಿಯ ನಿವಾಸದಲ್ಲಿ ಪತ್ತೆಯಾದ ರೂ.8.6  ಕೋಟಿ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ ಡಿ.ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದನ್ನು ವಿರೋಧಿಸಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೆ. 4ರಂದು ಸಂಜೆ ರಸ್ತೆ ತಡೆ  ಪ್ರತಿಭಟನೆ ನಡೆಯಿತು.
ಮೂರು ಮಾರ್ಗದ ಬಳಿಯ ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿ ಒಟ್ಟು ಸೇರಿದ ಕಾರ್ಯಕರ್ತರು ನಂತರ ಮೂರು ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ರಸ್ತೆ ತಡೆ ಪ್ರತಿಭಟನೆ ನಡೆಸಿ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್‌ಷಾ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಬಿ. ರಾಜಶೇಖರ ಅಜ್ರಿ ಹಾಗೂ ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಬೆಳಾಲು ಮಾತನಾಡಿ, ಕೇಂದ್ರ ಸರಕಾರ ತಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿ, ಶಿವಕುಮಾರ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ನಂತರ ಅಲ್ಲಿಂದ ಬೆಳ್ತಂಗಡಿ ಬಸ್‌ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಸ್‌ನಿಲ್ದಾಣದ ಬಳಿ ಪುನಃ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿದರು. ರಾಷ್ಟ್ರೀಯ ಹೆದ್ದಾರಿ ತಡೆಗೆ ನಿಯಮದಂತೆ ಅವಕಾಶ ನೀಡಿದ ಪೊಲೀಸರು ರಸ್ತೆ ತಡೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರೂ, ಕಾರ್ಯಕರ್ತರು ಕೇಳದಿದ್ದಾಗ ಪೊಲೀಸರು ರಸ್ತೆ ತಡೆ ಮಾಡುತ್ತಿದ್ದವರನ್ನು ಬಂಧಿಸಿ, ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಸದಸ್ಯ ರಾಮಚಂದ್ರ ಗೌಡ, ಡಿಸಿಸಿ ಕೆಪಿಸಿಸಿ ಎಸ್.ಸಿ ಘಟಕದ ಸದಸ್ಯ ನಾಗರಾಜ್ ಲಾಲ, ಸದಸ್ಯರಾದ ಜಗದೀಶ್ ಡಿ, ಲೋಕೇಶ್ವರಿ ವಿನಯಚಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಜಿಪಸ ಶೇಖರ ಕುಕ್ಕೇಡಿ, ಮಡಂತ್ಯಾರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅಬ್ದುಲ್‌ರಹಿಮಾನ್ ಪಡ್ಪು, ಜಿ.ಪಂ ಮಾಜಿ ಸದಸ್ಯ ಶೈಲೇಶ್ ಕುಮಾರ್, ತಾ.ಪಂ ಸದಸ್ಯ ಪ್ರವೀಣ್ ಗೌಡ, ನ.ಪಂ ಸದಸ್ಯ ಜನಾರ್ದನ, ಮುರಾಜ ಅಜ್ರಿ ಮಹಿಳಾ ಮುಖಂಡರಾದ ಜೆಸಿಂತಾ ಮೋಸ್, ಹಾಜಿರಾ, ಉಷಾಶರತ್, ಕಾಂಗ್ರೆಸ್ ಮುಖಂಡರಾದ ಆಶ್ರಪ್ ನೆರಿಯ, ಚಂದು ಎಲ್, ವಸಂತ ಬಿ.ಕೆ, ಅನೂಪ್ ಪಾಯಸ್, ನೇಮಿರಾಜ ಕಿಲ್ಲೂರು, ಕುಶಾಲಪ್ಪ ಗೌಡ ಶಿರ್ಲಾಲು, ನೇಮಿರಾಜ ಗೌಡ, ಹರೀಶ್ ಗೌಡ, ಮೆಬಬೂಬ್, ಗಣೇಶ್ ಕಣಾಲ್, ವಿನ್ಸೆಂಟ್ ಡಿ ಸೋಜ, ಮನೋಹರ್ ಇಳಂತಿಲ, ಸೇಸಪ್ಪ ನಲಿಕೆ, ಸಲೀಂ ಜಿ.ಕೆ, ನಾರಾಯಣ ಗೌಡ ದೇವಸ್ಯ ಮಹಮ್ಮದ್ ರಫಿ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.