ಬದುಕು ಒಂದು ಕಲಿಸಿತು ನೂರಾರು ಪಾಠ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ಹರ್ಷಿತಾ ಕುವೆಟ್ಟು  ಸ.ಪ್ರ.ದ ಕಾಲೇಜು ಪುಂಜಾಲಕಟ್ಟೆ

ಬದುಕಿನ ಪಯಣಕ್ಕೆ ತಿರುವು ನೀಡಿರೋ ಘಟನೆಗಳು, ನೆನೆದುಕೊಂಡರೆ ಮೈ ಜುಮ್ಮೆನ್ನಿಸುವ ವಿಚಾರಗಳು.
ಈ ವಿಚಾರ ವಿಸ್ತರಿಸುತ್ತಿದೆ ಇತ್ತೀಚಿಗೆ ನಡೆದ ಮಳೆಯ ಅಬ್ಬರಕ್ಕೆ ಕ್ಷಣ ಮಾತ್ರದಲ್ಲೇ ಎಲ್ಲವನ್ನು ಕಳೆದುಕೊಂಡ ಜನರ ಬದುಕಿನ ದುರ್ಘಟನೆಗಳು. ಮಳೆಯೇನೋ ಅದರ ಕಾಲಕ್ಕೆ ತಕ್ಕಂತೆ ಬಂದು ಹೋಯಿತು, ಆದರೆ ಎಲ್ಲವೂ ಕನಸು ಬಿದ್ದಂತೆ, ಕಲ್ಪನೆಗೂ ಮೀರದ ಜನಜೀವನವನ್ನೇ ಬದಲಿಸಿತು ಈ ಘಟನೆ. ಇದಕ್ಕೆಲ್ಲಾ ಕಾರಣವನ್ನು ಹುಡುಕುತ್ತಾ ಕುಳಿತರೆ ಸಿಗುವುದೊಂದೇ ಉತ್ತರ ಸ್ವಾರ್ಥ. ಎಂದೋ ಸ್ವಾರ್ಥವನ್ನು ತೊರೆದು ಇದ್ದದ್ದರಲ್ಲೇ ಚೆನ್ನಾಗಿ ಬದುಕು ಕಟ್ಟಿಕೊಂಡು ಇರುತ್ತಿದ್ದರೆ ಎಲ್ಲವೂ ನಿರಾಳವಾಗಿಯೇ ಇರುತ್ತಿತ್ತು. ನಾವು ಸ್ವಾರ್ಥದ ಹಾದಿಯಲ್ಲಿ ನಡೆದಂತೆ ಈ ಜಗತ್ತು ನಮ್ಮ ನೆರಳಂತೆ ನಮ್ಮ ದಾರಿಯನ್ನೇ ಗುರಿಯಾಗಿಟ್ಟು ನಮ್ಮೊಂದಿಗೆ ಹೆಜ್ಜೆ ಹಾಕಿದೆ .ನಾವು ಈ ಜಗತ್ತಿಗೆ ಏನು ಕೊಡುಗೆಯನ್ನು ಕೊಟ್ಟಿದ್ದೇವೆಯೋ ಅದನ್ನೆಲ್ಲಾ ಹಾಗೆ ಹಿಂದಿರುಗಿ ನಮ್ಮ ಬುಡಕ್ಕೆ ತಂದಿಟ್ಟಿದೆ.
ನಮ್ಮ ಬದುಕು ಹೇಗೆ ಸುಂದರವಾಗಿರಬೇಕೆಂದು ಹಂಬಲಿಸುತ್ತೇವೆಯೋ ಹಾಗೆಯೇ ನಮ್ಮ ಪ್ರಕೃತಿಯ ಸೊಬಗನ್ನು ಸುಂದರವಾಗಿಸುತ್ತಿದ್ದರೆ ಎಲ್ಲವೂ ಅದರಂತೆ ಸುಂದರವಾಗಿರುತ್ತಿತ್ತು..ನಮ್ಮ ಬದುಕಿಗೆ ಬೇಕಾಗುವ ಎಲ್ಲಾ ಅಗತ್ಯತೆಗಳನ್ನು ಪ್ರಕೃತಿಯಿಂದಲೇ ಪಡೆದು ಕೊನೆಗೆ ತಾವೇನು ಪಡೆದಿಲ್ಲವೆಂಬಂತೆ ಎಲ್ಲವನ್ನೂ ಮರೆತು ಅದರೆಡೆಗೆ ಗಮನಹರಿಸದೆ ಕಡೆಗಣಿಸಿದರೆ ಪ್ರಕೃತಿ ಮುನಿಯದೆ ಇದ್ದೀತೇ. ಪ್ರಕೃತಿಯೇ ಎಲ್ಲರನ್ನೂ ಎಚ್ಚರಿಸಲು ಇಂತಹ ಸನ್ನಿವೇಷಗಳನ್ನು ಸೃಷ್ಟಿಸಿರಬೇಕು. ನಮ್ಮ ಸ್ವಾರ್ಥಕ್ಕೆ ಯಾರಾದರೂ ವಿರುದ್ದವಾಗಿ ಎದುರಾದರೆ ಹೇಗೆ ಕೋಪಿಸಿಕೊಂಡು ಪ್ರತ್ಯುತ್ತರ ನೀಡುತ್ತೇವೆಯೋ ಹಾಗೆಯೇ ಪ್ರಕೃತಿಯು ತನ್ನ ಸೊಬಗಿನ ಬಣ್ಣಕ್ಕೆ ಮಸಿ ಬಳಿಯಲು ಯತ್ನಿಸಿದರೆ ಕೋಪಿಸಿಕೊಳ್ಳದೆ ಇದ್ದೀತೇ.

ಯಾವುದೇ ವಿಚಾರವನ್ನೂ ನಮಗೆ ಅರಿವಾಗಲು ಕೇವಲ ಮಾತಿನಿಂದ ತಿಳಿ ಹೇಳಿದರೆ ಸಾಲದು ಅದನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದಾಗಲೇ ನಮಗೆ ಚೆನ್ನಾಗಿ ಅರಿವಾಗುವುದು, ಹಾಗೆಯೇ ಈ ಪ್ರಕೃತಿಯು ಎಷ್ಟೋ ವರ್ಷಗಳಿಂದ ಸಣ್ಣ ಪ್ರಮಾಣದಲ್ಲೇ ತಿಳಿ ಹೇಳಲು ಪ್ರಯತ್ನಿಸುತ್ತಿದೆ ಆದರೆ ಏನೂ ಅರಿಯದವರಂತೆ ಪ್ರತಿಕ್ರಿಯೆ ಸಿಗದಿದ್ದಾಗ ತನ್ನ ಕೋಪವನ್ನು ದೊಡ್ಡ ಮಟ್ಟದಲ್ಲೇ ಎಲ್ಲರ ಮನಮುಟ್ಟುವ ರೀತಿಯಲ್ಲಿ ಪ್ರಾತ್ಯಕ್ಷಿಕೆ ನೀಡಿ ಎಚ್ಚರಗೊಳ್ಳುವಂತೆ ಮಾಡಿದೆ.
ನೆಮ್ಮದಿಯಿಂದ, ಸಂತೋಷದಿಂದ ಬಾಳಿ ಬದುಕುತ್ತಿದ್ದ ಎಷ್ಟೋ ಜೀವಗಳು ಇಂದು ತತ್ತರಿಸುವಂತಾಗಿದೆ.ಎಲ್ಲವನ್ನೂ ತೊರೆದು ಬದುಕಲೇ ಬೇಕಾದ ಪರಿಸ್ಥಿತಿ ಇಂದು ಎದುರಾಗಿದೆ. ಎಷ್ಟೇ ಸ್ವಾರ್ಥದಿಂದ ಕೂಡಿಟ್ಟು ಎಷ್ಟೇ ಸಂಪಾದಿಸಿದರು ಇಂದು ಯಾವುದೋ ಉಪಯೋಗಕ್ಕೆ ಬಾರದ ಸ್ಥಿತಿ ಎದುರಾಗಿದೆ. ಕೊನೆಗೂ ಯಾವುದನ್ನು ಹೊತ್ತುಕೊಂಡು ಬರಲು ಸಾಧ್ಯವಾಗಲಿಲ್ಲ, ಎಲ್ಲವೂ ನಶ್ವರ ಯಾವುದೂ ನಮ್ಮದಲ್ಲ ಎಲ್ಲವನ್ನು ಪ್ರಕೃತಿಯಿಂದಲೇ ಪಡೆದೆವು ಆ ಪ್ರಕೃತಿಯೆ ಎಲ್ಲವನ್ನು ಮರಳಿ ಪಡೆಯಿತು. ಎಷ್ಟು ಎತ್ತರ ಮಟ್ಟಕ್ಕೆ ಬೆಳೆದರೂ, ಎಷ್ಟೇ ಕೆಳಸ್ತರದಲ್ಲಿದ್ದರೂ ಇಂದು ಎಲ್ಲರೂ ಒಂದಾಗಿ ಬಾಳುವಂತಾಗಿದೆ. ಯಾವುದೇ ಜಾತಿ-ಮತ ಎನ್ನದೇ ಒಂದಾಗಿ ಬೆರೆತು ಸ್ವಾರ್ಥವನ್ನೆಲ್ಲಾ ತೊರೆದು ಒಬ್ಬರಿಗೊಬ್ಬರು ಸಹಕಾರಿಯಾಗಿ ತಮ್ಮ ಗುಣವನ್ನು ಬಹಳ ಉನ್ನತ ಸ್ಥಾನಕ್ಕೆ ಏರಿಸಿಕೊಂಡರು.
ಎಂದೋ ಹಸಿರೇ ಉಸಿರು ಎನ್ನುತ್ತಿದ್ದ ಕಾಲ ಇಂದು ಮರುಕಳಿಸಿದಂತಾಗಿದೆ. ಹಿಂದೆ ಹೇಳುತ್ತಿದ್ದ ಗಾದೆ ಮಾತುಗಳು ನಿಜವಾದಂತಿದೆ. ಈ ಬದುಕು ಎನ್ನುವಂತದ್ದು ಎಷ್ಟು ಒಳ್ಳೆಯ ನೀತಿ ಪಾಠಗಳನ್ನು ಕಲಿಸುತ್ತವೆ. ಆದರೆ ಎಲ್ಲವನ್ನು ಅರೆಗಳಿಗೆಯಲ್ಲೇ ಮರೆತು ಏನೂ ತಿಳಿದಿಲ್ಲವೆಂಬಂತೆ ವರ್ತಿಸುತ್ತೇವೆ. ಆದರೆ ಇಂದು ಮರೆಯಲು ಸಾಧ್ಯವಿಲ್ಲದ ಘಟನೆಯನ್ನು ಈ ಜಗತ್ತು ನಮಗೆ ನೀಡಿದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯ ವ್ಯಕ್ತಿಗಳ ಬುಡಕ್ಕೂ ಬಂದುಬಿಟ್ಟಿದೆ ಈ ನಡುಕ ಹುಟ್ಟಿಸುವ ಘಟನೆ ಎಲ್ಲವೂ ನಮ್ಮಿಂದಲೇ ಸರಿಯಾಗಬೇಕಿದೆ.
ಕೊನೆಗೂ ಹೊಸ ಪ್ರಾರಂಭಕ್ಕೆ ಪ್ರೇರೇಪಿಸುವಂತಾಗಿದೆ, ಎಲ್ಲವೂ ಹೊಸದಾಗಬೇಕಿದೆ. ಪ್ರಕೃತಿಯ ಸೊಬಗನ್ನು ಮೆರೆಸುವ ಹಾದಿಯೆಡೆಗೆ ಸಾಗಬೇಕಿದೆ.ನಿಸ್ವಾರ್ಥಕತೆಯ ಬಾಳ್ವೆಗೆ ಪ್ರಕೃತಿ ಕಾತುರದಿಂದ ಕಾಯುತಿದೆ. ಎಂದು ನಮ್ಮ ಹಾದಿ ಒಳ್ಳೆತನದೆಡೆಗೆ ಸಾಗುತ್ತದೋ ಅಂದು ನಮ್ಮ ಸೊಬಗು ಉನ್ನತ ಸ್ಥಾನದೆಡೆಗೆ ಕಂಗೊಳಿಸುತ್ತದೆ. ಬದುಕಿನ ಹೊಸತನಕ್ಕೆ ಹೊಸ-ಹೊಸ ವಿಚಾರಗಳ ಬೆಳವಣಿಗೆಯಾಗಬೇಕಿದೆ. ಹೊಸತನದ ಹಾದಿಯಲ್ಲಿ ಹೊಸ ಹುರುಪು ಮೂಡಲಿ ಎಂದು ಪ್ರಕೃತಿ ನಮ್ಮನೆಲ್ಲಾ ಸ್ವಾಗತಿಸುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.