ಪದ್ಮುಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಮತ್ತು ಸರ್ಕಾರಿ ಪ್ರೌಢಶಾಲೆ ಪದ್ಮುಂಜ, ಸರ್ಕಾರಿ ಪದವಿಪೂರ್ವ ಕಾಲೇಜು ಪದ್ಮುಂಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಪದ್ಮುಂಜದಲ್ಲಿ ನಡೆಯಿತು, ಕಾರ್ಯಕ್ರಮವನ್ನು ಇಳಂತಿಲ ಗ್ರಾಮದ ತಾಲೂಕು ಪಂಚಾಯತ್ ಸದಸ್ಯ ಕೃಷ್ಣಯ್ಯ ಆಚಾರ್ಯ ಇವರು ದೀಪ ಪ್ರಜ್ವಲಿಸುವ ಮುಖಾಂತರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿಯಾದ ನಂದಕುಮಾರ್ ದುಶ್ಚಟ ದುರಭ್ಯಾಸಗಳ ಬಗ್ಗೆ ಸಮಗ್ರವಾದ ವಿಷಯದೊಂದಿಗೆ ವಿದ್ಯಾರ್ಥಿ ಜೀವನದಲ್ಲಿ ನಾವು ಯಾವ ರೀತಿ ಸುಲಭವಾಗಿ ದುಶ್ಚಟಗಳ ದಾಸರಾಗುತ್ತೇವೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ಸುಮತಿಯವರು ವಹಿಸಿದ್ದರು. ವೇದಿಕೆಯಲ್ಲಿ ಪದ್ಮುಂಜ ಒಕ್ಕೂಟದ ಅಧ್ಯಕ್ಷೆ ಗೀತಾ. ಕೆ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಕಣಿಯೂರು ವಲಯದ ಮೇಲ್ವಿಚಾರಕ ಮಾಧವ.ಎಂ. ನಿರೂಪಿಸಿದರು ಶಾಲೆಯ ಶಿಕ್ಷಕ ರವಿಕುಮಾರ್ ಇವರು ಸ್ವಾಗತಿಸಿ ಪದ್ಮುಂಜ ಗ್ರಾಮದ ಸೇವಾಪ್ರತಿನಿಧಿಯಾದ ಸೀತಾರಾಮ ಆಳ್ವ. ಧನ್ಯವಾದ ನೀಡಿದರು