ಜಿ.ಪಂ ಸದಸ್ಯೆ ನಮಿತಾ ರಿಗೆ ಮಾತೃವಿಯೋಗ

ತೋಟತ್ತಾಡಿ: ತೋಟತ್ತಾಡಿ ನಿವಾಸಿ, ಉಜಿರೆ ಜಿ.ಪಂ ಸದಸ್ಯೆ ನಮಿತಾ ಕೆ ಪೂಜಾರಿ ಅವರ ತಾಯಿ ಕೂಸಮ್ಮ (85 ವ.)ಅವರು ಆ. 23 ರಂದು ನಿಧನರಾಗಿದ್ದಾರೆ.
ದಿ.ಬಾಲಪ್ಪ ಪೂಜಾರಿ ಅವರ ಧರ್ಮಪತ್ನಿಯಾಗಿದ್ದ ಕೂಸಮ್ಮ ಅವರು ಕೃಷಿ ಮತ್ತು ಪೂರಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರ ಐವರು ಮಕ್ಕಳ ಪೈಕಿ ಓರ್ವ ಪುತ್ರ ಜಗದೀಶ್ ಅವರು ಈ ಹಿಂದೆಯೇ ಮೃತಪಟ್ಟಿದ್ದರು. ಇದೀಗ ಮೃತರು ಪುತ್ರರಾದ ಜಯರಾಮ ಮತ್ತು ಕಮಲಾಕ್ಷ, ಪುತ್ರಿಯರಾದ ಜಿ.ಪಂ ಸದಸ್ಯೆ ನಮಿತಾ ಕೆ ಪೂಜಾರಿ, ಬೆಂಗಳೂರಿನಲ್ಲಿ ಗ್ರಂಥಾಲಯದಲ್ಲಿ ಸರಕಾರಿ ಉದ್ಯೋಗದಲ್ಲಿರುವ ಪುತ್ರಿ ಜಲಜಾ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಮನೆಗೆ ಮಾಜಿ ಶಾಸಕ ವಸಂತ ಬಂಗೇರ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ ಅಜ್ರಿ, ತಾ| ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಿ ಅಶ್ರಫ್ ನೆರಿಯ ಹಾಗೂ ಇತರ ಗಣ್ಯರುಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ದೆಹಲಿಯಲ್ಲಿದ್ದ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.