ಬೆಂದ್ರಾಳ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ

ತೋಟತ್ತಾಡಿ: ಇಲ್ಲಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ತೋಟತ್ತಾಡಿ ಇದರ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು.
ಮುಖ್ಯ ಅತಿಥಿ ಉಜಿರೆ ಉದ್ಯಮಿ ಪ್ರಮೋದ್ ದಿಡುಪೆ ಮಾತನಾಡಿ, ಕೃಷ್ಣ ಲೀಲೋತ್ಸವದ ಮೊಸರು ಕುಡಿಕೆ ಕ್ರೀಡಾಕೂಟವು ಹಿಂದೂ ಸಮಾಜದಲ್ಲಿ ಸಹೋದರತ್ವನ್ನು ಸಾರುತ್ತದೆ ಮತ್ತು ಭಾವೈಕ್ಯದ ಸಂಕೇತವಾಗಿದೆ ಎಂದರು.
ಶ್ರೀ ಕೃಷ್ಣ ಸಮಿತಿ ಅಧಕ್ಷ ನಂದೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇವಳದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಇರ್ವತ್ರಾಯ, ತಾ.ಪಂ ಸದಸ್ಯ ಕೊರಗಪ್ಪ ಗೌಡ ಅರಣೆಪಾದೆ, ಕೃಷ್ಣಾಷ್ಟಮಿ ಸಮಿತಿ ಮಾಜಿ ಅಧ್ಯಕ್ಷ ಚಿದಾನಂದ ಗೌಡ ಹೊಸಮನೆ, ಸೀತಾರಾಮ ಕಜೆ, ತೋಟತ್ತಾಡಿ ಶಾಲಾ ಶಿಕ್ಷಕ ಮೋಹನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಆಟೋಟ ಸ್ಪಧೆಗಳು ನಡೆದು, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಗದೀಶ್ ಸ್ವಾಗತಿಸಿ, ಲೋಕೇಶ್ ಶೆಟ್ಟಿ ನಿರೂಪಿಸಿ, ಗ್ರಾ.ಪಂ ಸದಸ್ಯ ಓಬಯ್ಯ ಗೌಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.