ಮುಗೇರಡ್ಕದಲ್ಲಿ ಇನ್ನು ಮೋಟಾರು ಬೋಟು ಸೇವೆ

Advt_NewsUnder_1
Advt_NewsUnder_1

ಮೊಗ್ರು  :  ಮುಗೇರಡ್ಕ ಹಾಗೂ ವಲಾಲು ಇದರ ಸಂಪರ್ಕ ಸೇತುವಾಗಿದ್ದ ಮುಗೇರಡ್ಕ ತೂಗುಸೇತುವೆ  ಇತ್ತೀಚಿಗೆ  ಸಂಭವಿಸಿದ  ಭಾರಿ  ಪ್ರವಾಹಕ್ಕೆ  ಕೊಚ್ಚಿಕೊಂಡು ಹೋಗಿ ಜನರ ಸಂಚಾರಕ್ಕೆ ಬಹಳ ತೊಂದರೆಯಾಗಿತ್ತು. ಇದನ್ನು ಮನಗಂಡ  ಶಾಸಕ   ಹರೀಶ್ ಪೂಂಜ ಹಾಗೂ ಪುತ್ತೂರಿನ  ಶಾಸಕ   ಸಂಜೀವ ಮಠಂದೂರು ಈ ಭಾಗಕ್ಕೆ ಮೋಟಾರ್ ಬೋಟಿನ ವ್ಯವಸ್ಥೆ ಮಾಡಿರುತ್ತಾರೆ. ಸಚಿವ   ಕೋಟ  ಶ್ರೀನಿವಾಸ್ ಪೂಜಾರಿಯವರ ಸಹಕಾರದೊಂದಿಗೆ ಮುರುಡೇಶ್ವರದಿಂದ ಮೋಟಾರ್ ಬೋಟನ್ನು ತರಿಸಿ ಜನರಿಗೆ ಅನುಕೂಲ ಮಾಡಿದ್ದಾರೆ. ಮುರುಡೇಶ್ವರದಿಂದ ಬೋಟನ್ನು ವಲಾಳಿಗೆ ತರಿಸುವ ಎಲ್ಲಾ ಖರ್ಚು ಶಾಸಕ ಹರೀಶ್ ಪೂಂಜ ಅವರು ತಮ್ಮ ವೈಯುಕ್ತಿಕ ನೆಲೆಯಲ್ಲಿ ನೀಡಿ ಜನರ ಸಮಸ್ಯೆಗೆ ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿ   ಜನ ಮೆಚ್ಚಿದ ಶಾಸಕ ಅನ್ನುವುದನ್ನು ಇನ್ನೊಮ್ಮೆ ನಿರೂಪಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.