ವಾಟ್ಸಪ್ ಗ್ರೂಪ್‌ನಲ್ಲಿ ದೇವರ ನಿಂದನೆ: ಇಬ್ಬರ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
ರಮೀಝ್ ವಿಟ್ಲ         ಅಬ್ದುಲ್ ಸಲಾಂ

ಬೆಳ್ತಂಗಡಿ: ಹಿಂದೂ ಧರ್ಮದ ಹೆಸರಿನಲ್ಲಿ ವಾಟ್ಸ್‌ಫ್ ಗ್ರೂಪ್ ರಚಿಸಿದ ಮುಸ್ಲಿಂ ಸಮುದಾಯದ ತಂಡವೊಂದು ಅದರಲ್ಲಿ ಹಿಂದೂಗಳ ದೇವರನ್ನು ನಿಂದಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸದಂತೆ ಬೆಳ್ತಂಗಡಿ ಪೊಲೀಸರು ಇಬ್ಬರನ್ನು ಬಂಧಿಸಿ, ಗ್ರೂಪ್ ಎಡ್ಮಿನ್‌ನನ್ನು ವಶಕ್ಕೆ ಪಡೆದು ಕೊಂಡು ತನಿಖೆ ನಡೆಸುತ್ತಿರುವ ಪ್ರಕರಣ ಆ.22ರಂದು ವರದಿಯಾಗಿದೆ.
ವಿಟ್ಣ ನಗರ ಸಮೀಪದ ನಿವಾಸಿ ರಮೀಝ್ ವಿಟ್ಲ(28ವ) ಹಾಗೂ ಬಂಟ್ವಾಳ ನಿವಾಸಿ ಅಬ್ದುಲ್ ಸಲಾಂ(26.ವ) ಬಂಧಿತ ಆರೋಪಿಗಳಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾರುಪಡಿಸಿದಾಗ ಆರೋಪಿಗಳಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಗ್ರೂಪ್ ಎಡ್ಮಿನ್ ಫಯಾಜ್ ತುಂಬೆ ಎಂಬಾತನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆ ಮುಂದುವರಿದೆ.
ಬಂಟ್ವಾಳ ತಾಲೂಕು ವಿಟ್ಲ ಪರಿಸರದ ಮುಸ್ಲಿಂ ಸಮುದಾಯದ ಸುಮಾರು 39 ಮಂದಿ ಯುವಕರು ಸೇರಿ `ಶಿವಾಜಿ ಅಭಿಮಾನಿಗಳು’ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ರಚಿಸಿಕೊಂಡು ಇದಕ್ಕೆ ಬೆಳ್ತಂಗಡಿ ಧರ್ಮಸ್ಥಳದ ನಿವಾಸಿ ಹಿಂದೂ ಯುವಕ ವಿಕ್ರಂದಾಸ್ ಎಂಬವರನ್ನು ಸೇರಿಸಿದ್ದರು. ಬಳಿಕ ಗ್ರೂಪ್‌ನಲ್ಲಿ ಹಿಂದೂ ದೇವರನ್ನು ಬೇರೆ, ಬೇರೆ ರೀತಿಯಲ್ಲಿ ನಿಂದಿಸಲಾಗುತ್ತಿದ್ದು, ಪ್ರಾರಂಭದಲ್ಲಿ ಮೌನವಾಗಿದ್ದ ಹಿಂದೂ ಯುವಕ ವಿಕ್ರಂ ಇದನ್ನು ನೋಡಿ ತಡೆಯಲಾಗದೆ ಅವರ ದೇವರನ್ನು ನಿಂದನೆಯನ್ನು ಮಾಡಿದ್ದ. ನಿರಂತರವಾಗಿ ಎರಡು ಕೋಮುಗಳ ದೇವರ ಕುರಿತು ನಿಂದನೆಗಳು ನಡೆಯುತ್ತಿತ್ತು. ಈ ನಡುವೆ ಇವರ ಸಂದೇಶಗಳು ವೈರಲ್ ಆದ ಹಿನ್ನಲೆಯಲ್ಲಿ ವಿಕ್ರಂದಾಸ್ ದೂರು ನೀಡಿರುವುದಾಗಿ ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.
ಕೋಮುಗಲಭೆ ಸೃಷ್ಟಿಸುವ ಹುನ್ನಾರ: ಇದೊಂದು ಕೋಮುಗಲಭೆ ಸೃಷ್ಠಿಸುವ ಹುನ್ನಾರವಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಂಥ ಪ್ರಕರಣಗಳು ಮರುಕಲಿಸಬಾರದು ಎಂಬ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಈ ಗ್ರೂಪ್‌ನಲ್ಲಿರುವ ಇತರ ಎಡ್ಮಿನ್‌ಗಳ ವಶಕ್ಕೆ ಪಡೆದು ವಿಚಾರಣೆ ನಡೆಸಲು ಶೋಧ ಕಾರ್ಯ ಮುಂದುವರಿದಿದೆ ಎಂದು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.