ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಳಂಜ ಬಿಲ್ಲವ ಸಂಘದ ಸಭಾಭವನಕ್ಕೆ ರೂ.1 ಲಕ್ಷ ದೇಣಿಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಳಂಜ : ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ಬಳಂಜ-ನಾಲ್ಕೂರು-ತೆಂಕಕಾರಂದೂರು ಇದರ ನೂತನ ಸಭಾಭವನವು ಸಮಾರು 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಸಭಾಭವನದ ಕೆಲಸ ಕಾರ್ಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|.ಡಿ ವೀರೇಂದ್ರ ಹೆಗ್ಗಡೆಯವರು ರೂ.1 ಲಕ್ಷ ದೇಣಿಗೆ ನೀಡಿದ್ದಾರೆ.
ಗುರುವಾಯನಕೆರೆ ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಯೋಜನಾಧಿಕಾರಿ ಯಶವಂತರವರು ಬಳಂಜ-ಬಿಲ್ಲವ ಸಂಘಕ್ಕೆ ಬೇಟಿ ನೀಡಿ ರೂ.೧ಲಕ್ಷದ ಚೆಕ್‌ನ್ನು ಬಳಂಜ ಬಿಲ್ಲವ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್ ಅವರಿಗೆ ಆ. 19 ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಗು.ನಾ.ಸೇ.ಸಂಘದ ನಿರ್ದೇಶಕ ಸಂತೋಷ್ ಪಿ.ಕೋಟ್ಯಾನ್, ಸಂಘದ ಕಾರ್ಯದರ್ಶಿ ಯೋಗೀಶ್ ಪೂಜಾರಿ, ಮಾಜಿ ಅಧ್ಯಕ್ಷರಾದ ಯುವರಾಜ್ ವೈ ಎಲ್ಯೋಟ್ಟು, ಬಾಲಕೃಷ್ಣ ಪೂಜಾರಿ ಯೈಕುರಿ, ದೇಜಪ್ಪ ಪೂಜಾರಿ ಸುಧಾಮ, ದಿನೇಶ್ ಕೋಟ್ಯಾನ್ ಕುದ್ರೋಟ್ಟು, ಮಾಜಿ ಕಾರ್ಯದರ್ಶಿ, ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು, ನಾರಾಯಣ ಪೂಜಾರಿ ದರ್ಖಾಸು, ವಸಂತ ಪೂಜಾರಿ ತಾರಿಪಡ್ಪು, ಅಶ್ವಿನ್ ಬೊಂಟ್ರೋಟ್ಟು, ಲಕ್ಷ್ಮಣ ಪೂಜಾರಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.