ಮುಂಡಾಜೆ ಕೃಷ್ಣ. ಜಿ ಮರಾಠೆ ನಿಧನ

ಮುಂಡಾಜೆ : ಇಲ್ಲಿಯ  ಅರಳಿಕಟ್ಟೆ ಕೊಡ0ಗೆ ಮನೆಯ ನಿವಾಸಿ ಕೃಷ್ಣ ಜಿ ಮರಾಠೆ (73) ರವರು ಅಸೌಖ್ಯದಿಂದ ಆ.21ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮುಂಡಾಜೆ ಪ್ರಾಥಮಿಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಸ್ಥಳೀಯವಾಗಿ ಚಿತ್ಪಾವನ ಸಂಘಟನೆ, ದತ್ತಾತ್ರೇಯ ಭಜನಾ ಮಂದಿರ, ಸಮಾಜ ಸೇವಾ ಸಂಘ ಮೊದಲಾದ ಹಲವು ಸಂಘ ಸಂಸ್ಥೆಗಳನ್ನು ಕಟ್ಟುವಲ್ಲಿ ಮತ್ತು ಅವುಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೃಷಿಕರಾಗಿದ್ದ ಇವರು ವೈದಿಕ ತಯಾರಿಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ರುಕ್ಮಿಣಿ ಮರಾಠೆ, ಪುತ್ರರಾದ ಕಿರಣ ಮರಾಠೆ, ಪ್ರದೀಪ್ ಮರಾಠೆ, ಪುತ್ರಿ ರೇವತಿ, ಅಳಿಯ ಶಿವರಾಮ ಗೋರೆ ಮಾಳ, ಸೊಸೆಯರಾದ ಸುಮಾ,ಸುಷ್ಮಾ,ಸಹೋದರ ಅರಳಿಕಟ್ಟೆ ಗೋವಿಂದ ಮರಾಠೆ, ಸಹೋದರಿಯರು, ಮೊಮ್ಮಕ್ಕಳ ಸಹಿತ ಅನೇಕ ಬಂಧು ಬಾಂಧವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.