ದ.ಕ ಬರಪೀಡಿತ ತಾಲೂಕಿಗೆ ಗೋಶಾಲೆ

ಬೆಳ್ತಂಗಡಿ: ದ.ಕ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಪುತ್ತೂರು ಮತ್ತು ಸುಳ್ಯ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ.
ಬರಪೀಡಿತ ತಾಲೂಕುಗಳಲ್ಲಿ ಗೋಶಾಲೆ ತೆರೆಯುವಂತೆ ಹೈಕೋರ್ಟು ಆದೇಶಿಸಿದೆ. ಅದರಂತೆ ದ.ಕ ಜಿಲ್ಲೆಯ ಐದು ತಾಲೂಕುಗಳಲ್ಲಿ ಗೋಶಾಲೆ ತೆರೆದು, ಈ ಶಾಲೆಗಳಿಗೆ ಬರುವ ಜಾನುವಾರುಗಳಿಗೆ ಪ್ರತಿದಿನ 5 ಕೆ.ಜಿ ಒಣಮೇವು ಅಥವಾ 18 ಕೆ.ಜಿ ಹಸಿರು ಮೇವು ಮತ್ತು1 ಕೆ.ಜಿ ಪಶು ಆಹಾರ ನೀಡಲಾಗುವುದು.
ಬೆಳ್ತಂಗಡಿ ತಾಲೂಕಿನಲ್ಲಿ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಗೋಶಾಲೆಯಾಗಿದ್ದು, ಸಂತ್ರಸ್ತ ರೈತರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.