ರಾಜ್ಯಮಟ್ಟದ ಕರಾಟೆ : ಮಲವಂತಿಗೆಯ ಧ್ಯಾನ್ ಕೋಟ್ಯಾನ್ ಡಿ ಪ್ರಥಮ

ಮಲವಂತಿಗೆ: ಮಂಗಳೂರಿನ ಕುದ್ರೋಳಿ ಕೊರಗಪ್ಪ ಸಭಾಭವನದಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾಟದಲ್ಲಿ ಉಜಿರೆ ಅನುಗ್ರಹ ಆಂ. ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಧ್ಯಾನ್ ಕೋಟ್ಯಾನ್ ಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬಂಗಾಡಿಯಲ್ಲಿ ನಡೆದ ತಾ. ಮಟ್ಟದ ಕುಮಿತೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಯಮಾತೋ ಶೋಟೋಕಾನ್ ಕರಾಟೆ ಅಸೋಷಿಯೇಶನ್ ವಿದ್ಯಾರ್ಥಿ ಅಶೋಕ ಆಚಾರ್ಯ ಅವರಿಂದ ತರಬೇತಿ ಪಡೆದು ಧ್ಯಾನ್ ಕೋಟ್ಯಾನ್ ಈ ಪಂದ್ಯದಲ್ಲಿ ಭಾಗಿಯಾಗಿದ್ದರು. ಇವರು ಮಲವಂತಿಗೆ ಗ್ರಾಮದ ರಾಗಿಕುಮೇರು ಮನೆಯ ದಯಾನಂದ ಆರ್ ಮತ್ತು ಲಾವಣ್ಯ ಕೆ ದಂಪತಿ ಪುತ್ರ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.