ಪ್ರವಾಹ ಪೀಡಿತ ಗ್ರಾಮಗಳಿಗೆ ಮತ್ತೆ ಬೆಳಕು ಆಹೋರಾತ್ರಿ ಶ್ರಮಿಸಿದ ಮೆಸ್ಕಾಂ ಇಲಾಖೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಶೇ.80  ಕಾಮಗಾರಿ ಪೂರ್ಣ-ಅಂದಾಜು 1 ಕೋಟಿ ರೂ ನಷ್ಟ

ಬೆಳ್ತಂಗಡಿ: ಪ್ರವಾಹ ಪೀಡಿತ ಪ್ರದೇಶಗಳೂ ಸೇರಿದಂತೆ ತಾಲೂಕಿನ ಒಟ್ಟು ಭಾಗಗಳಲ್ಲಿ ಮಳೆ ಹಾನಿಯಿಂದಾಗಿ ಮೆಸ್ಕಾಂ ಇಲಾಖೆಗೆ 1  ಕೋಟಿ ರೂ. ಗಳಷ್ಟು ನಷ್ಟ ಉಂಟಾಗಿದ್ದು, ಅವುಗಳ ಮರುಜೋಡಣೆ ಮತ್ತು ಆಯಾ ಪ್ರದೇಶಗಳಿಗೆ ಮತ್ತೆ ಬೆಳಕು ನೀಡುವಲ್ಲಿ ಮೆಸ್ಕಾಂ ಇಲಾಖೆ ಆಹೋರಾತ್ರಿ ಶ್ರಮಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಳ್ತಂಗಡಿ ಮೆಸ್ಕಾಂ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಶಂಕರ ಸಿ.ಎಚ್ ಇವರ ನೇತೃತ್ವದಲ್ಲಿ ಮೇಲಾಧಿಕಾರಿಗಳ ಸಲಹೆ ಮಾರ್ಗದರ್ಶನದಂತೆ ಸುಮಾರು 28  ತಂಡಗಳಲ್ಲಿ 300 ರಷ್ಟು ಕಾರ್ಮಿಕರು ದುಡಿದ ಫಲವಾಗಿ ಇಂದು  ಶೇ. 80 ಪರಿಹಾರ ಕಾಮಗಾರಿಗಳಲ್ಲಿ ಯಶಸ್ಸು ಸಾಧಿಸಲಾಗಿದೆ.
ಉನ್ನತ ಅಧಿಕಾರಿಗಳು ಭೇಟಿ, ಮಾರ್ಗದರ್ಶನ:ಎಷ್ಟೇ ಮಳೆ ಬಂದರೂ ಕೂಡ ಎಲ್ಲೂ ಪ್ರಾಣ ಹಾನಿಯಾಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಮೆಸ್ಕಾಂ ಇಲಾಖೆ ಕೈಗೊಂಡಿತ್ತು. ಅದಾಗ್ಯೂ ಪ್ರಾಕೃತಿಕ ವೈಪರೀತ್ಯದಿಂದ ತಾಲೂಕಿನಲ್ಲಿ ಆಗಿರುವ ಅನಾಹುತ ಸರಿಪಡಿಸುವ ದೃಷ್ಟಿಯಿಂದ ಇಲಾಖೆಯ ಎಂ.ಡಿ ಐಎಎಸ್ ದರ್ಜೆಯ ಸ್ನೇಹಾಲ್ ಆರ್, ಮಂಗಳೂರಿನ ಅಧೀಕ್ಷಕ ಇಂಜಿನಿಯರ್ ಮಂಜಪ್ಪ, ಕಾರ್ಯನಿರ್ವಾಹಕ ಇಂಜಿನಿಯರ್ ಎಂ ರಾಮಚಂದ್ರ ಇವರು ಭೇಟಿ ನೀಡಿ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.
ಎಇಇ ಜೊತೆ ಸೋಮಂತಡ್ಕ ಘಟಕದ ಜೆಇ ಶಂಕರ್, ಧರ್ಮಸ್ಥಳ ವಿಭಾಗದ ಎಇ ವಿಕ್ರಂ ಮತ್ತು ಮಿನಿ ಜಾರ್ಜ್, ಟೀಮ್ ಲೀಡರ್‌ಗಳಾದ ಅಶೋಕ್, ಸುರೇಶ್ ಮೊದಲಾದವರು ಸಾಥ್ ನೀಡಿದ್ದಾರೆ.

ಒಟ್ಟು ಪ್ರವಾಹದಲ್ಲಿ ತಾಲೂಕಿನಲ್ಲಿ 585 ಕಂಬಗಳಿಗೆ ಹಾನಿಯಾಗಿವೆ. 15  ಪರಿವರ್ತಕಗಳು(ಟ್ರಾನ್ಸ್‌ಫಾರ್ಮರ್)ಗಳು ಕೈಕೊಟ್ಟಿದೆ. ಇಷ್ಟು ದೊಡ್ಡ ಪ್ರಮಾಣದ ನಷ್ಟಗಳು ಆಗಿದ್ದರೂ ನಮ್ಮ ತಂಡ ರಾತ್ರಿ ಹಗಲೆನ್ನದೆ ಓಡಾಡಿ ಸಮರ್ಪಕ ಕೆಲಸ ಮಾಡಿದೆ. ರಸ್ತೆ ಸಂಪರ್ಕಕ್ಕೆ ಅಸಾಧ್ಯವಿರುವ ಪ್ರದೇಶದ ಕಾಮಗಾರಿಗಳು ಮಾತ್ರ ಬಾಕಿ ಇದ್ದು ಒಂದೆರಡು ದಿನಗಳಲ್ಲಿ ಅವುಗಳನ್ನೂ ನಿರ್ವಸಹಿಸಲಾಗುತ್ತದೆ.
                                                                                                                                                                                                                                                                                                                       -ಶಿವಶಂಕರ್ ಸಿ.ಎಚ್, ಎಇಇ ಬೆಳ್ತಂಗಡಿ ಮೆಸ್ಕಾಂ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.