ಹೈಕೋರ್ಟ್ ಆದೇಶದಂತೆ 1.26 ಎಕ್ರೆ ವಿವಾದಿತ ಭೂಮಿ ಪಂ. ವಶಕ್ಕೆ

ತಹಶಿಲ್ದಾರ್‌ರಿಂದ ಸೂಕ್ತ ಕ್ರಮ ಜಾರಿ: ರಸ್ತೆ ಮಾಡಿಕೊಡುವಂತೆಯೂ ನ್ಯಾಯಾಲಯ ಆದೇಶ

ಉಜಿರೆ: ಇಲ್ಲಿನ ತಿಮರೋಡಿ ಎಂಬಲ್ಲಿ ಹಲವು ವರ್ಷಗಳಿಂದ ಜಾಗದ ವಿವಾದ ಉಂಟಾಗಿ ರಾಜ್ಯದ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಕೊನೆಗೂ 1.26 ಎಕ್ರೆ ಜಾಗವನ್ನು ಖಾಸಗಿಯವರಿಂದ ಸರಕಾರ ವಶಕ್ಕೆ ಪಡೆದುಕೊಂಡು ಉಜಿರೆ ಗ್ರಾ.ಪಂ.ಗೆ ಹಸ್ತಾಂತರಿಸಲಾಗಿದೆ.
ರಾಜ್ಯ ಹೈಕೋರ್ಟ್ ಆದೇಶದಂತೆ ತಹಶಿಲ್ದಾರ್ ಗಣಪತಿ ಶಾಸ್ತ್ರಿ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಅತಿಕ್ರಮಣ ತೆರವುಗೊಳಿಸಿ ಕ್ರಮ ಜರುಗಿಸಿದರು. ಸದ್ರಿ ಜಾಗದಲ್ಲಿ ಇದ್ದ ರಬ್ಬರ್ ಮರಗಳನ್ನು ಸಂಪೂರ್ಣ ಕಡಿದು ವಶಕ್ಕೆ ಪಡೆದುಕೊಂಡರು. ಸದ್ರಿ ಜಾಗದಲ್ಲಿ ಅನಾದಿಕಾಲದಿಂದಲೂ ದಾರಿ ಇತ್ತು ಎಂದು ದೂರುದಾರರಾದ ಜಯಪ್ರಕಾಶ್ ಶೆಟ್ಟಿ ಮತ್ತು ಭಾಸ್ಕರ ನಾಯ್ಕ ಅವರು ವಾದಿಸಿದ್ದು ಅದನ್ನು ಪುಷ್ಟೀಕರಿಸಿದ ನ್ಯಾಯಾಲಯ, ಸದ್ರಿ ವಶಕ್ಕೆ ಪಡೆಯುವ ಜಾಗದಲ್ಲಿ 20 ಅಡಿ ಅಗಲದ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು ಎಂದು ಆದೇಶ ನೀಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.