ರಾಜೀವ್ ಗಾಂಧಿ ಮತ್ತು ದೇವರಾಜ್ ಅರಸು ಜನ್ಮ ದಿನಾಚರಣೆಯ ಅಂಗವಾಗಿ ಸಂತ್ರಸ್ತರಿಗೆ ಸಹಾಯ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಚಾರ್ಮಾಡಿ ಗ್ರಾಮಗಳಲ್ಲಿ ಮಾಜಿ ಪ್ರಧಾನ ಮಂತ್ರಿಗಳಾದ ದಿ|| ರಾಜೀ ವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ದಿ|| ದೇವರಾಜ್  ಅರಸ್ ಇವರ ಜನ್ಮದಿನಾಚರಣೆಯ ಅಂಗವಾಗಿ ದ.ಕ ಜಿಲ್ಲಾ ಸಮಿತಿಯ ವತಿಯಿಂದ ಸಂತ್ರಸ್ತರಿಗೆ ನೆರೆ ಪರಿಹಾರ ಸಹಾಯ ಧನದ ಕಾರ್ಯಕ್ರವನ್ನು ದ.ಕ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆ.20ರಂದು ಕಕ್ಕಿಂಜೆಯಲ್ಲಿ ಆಯೋಜಿಸಲಾಗಿತ್ತು. ಪ್ರಕೃತಿವಿಕೋಪದಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ದ. ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಯು.ಟಿ. ಖಾದರ್,ವಿಧಾನ ಪರಿಷತ್ತಿನ ಸದಸ್ಯ ಕೆ. ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ. ನಮಿತಾ. ಕೆ, ಎಂ.ಎಸ್ ಖ.ಮಹಮ್ಮದ್. ಕೆ. ಕೆ.ಸಾಹುಲ್ ಹಮೀದ್, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ .ರಾಜ ಶೇಖರ ಅಜ್ರಿ. ತಾ.ಪಂ. ಸದಸ್ಯರಾದ. ವಿ. ಟಿ. ಸೆಬಾಸ್ಟಿನ್. ಪ್ರವೀಣ್ ಕೋಯ್ಯೂರು,.ಯುವಕ ಕಾಂಗ್ರೆಸ್ ಆದ್ಯಕ್ಷ ಅಬಿನಂದನ್, ಅಲ್ಪಸಂಖ್ಯಾತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಬಿ. ಅಶ್ರಫ್ ನೇರಿಯ, ಅಯ್ಯುಬ್‌ಕಳಿಯ. ಮುಂಡಾಜೆ ಗ್ರಾ.ಪಂ ಅಧ್ಯಕ್ಷೆ ಶಾಲಿನಿ, ಪುದುವೆಟ್ಟು ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ಕಲಿಯದ, ಎ.ಪಿ.ಎಂ.ಸಿ ಉಪಾಧ್ಯಕ್ಷ ಗಫೂರ್, ,ಪ್ರಮುಖರಾದ ಹಸನಬ್ಬ ಚಾರ್ಮಡಿ, ಎ.ಮಮ್ಮಿಕುಂಞ,ಯಶೋಧರ ವಳಸಾರಿ, ಅಯ್ಯೂಬ್ ಕಲ್ಲೇರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.