ಪಾಕಿಸ್ತಾನಕ್ಕೆ ಕರೆ ಹಿನ್ನಲೆ: ಓರ್ವ ಬಂಧನ ಎಂಬುದಾಗಿ ವದಂತಿ

ಬೆಳ್ತಂಗಡಿಯಿಂದ ಪಾಕ್‌ಗೆ ಯಾವುದೇ ಸ್ಯಾಟ್‌ಲೈಟ್ ಕರೆಗಳು ಹೋಗಿಲ್ಲ ಎಸ್ಪಿ ಸ್ಪಷ್ಟನೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗೋವಿಂದೂರು ಪ್ರದೇಶದಿಂದ ಸೆಟಲೈಟ್ ಮೂಲಕ ಪಾಕಿಸ್ತಾನಕ್ಕೆ ಕರೆ ಹೋಗಿದೆ ಎಂಬ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ಭಯೋತ್ಪಾದಕ ದಾಳಿ ಶಂಕೆಯಿಂದ ಕಟ್ಟೆಚ್ಚರ ಘೋಷಿಸಲಾದ ಬೆನ್ನಲ್ಲೇ ಈ ಅಂಶ ಬೆಳಕಿಗೆ ಬಂದಿರುವ ಕಾರಣ ಸಹಜವಾಗಿಯೆ ಜನರು ಭಯಭೀತರಾಗಿದ್ದಾರೆ. ದೆಹಲಿಯಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರನೊಬ್ಬ ಈ ವಿಚಾರ ಬಾಯ್ಬಿಟ್ಟಿದ್ದಾನೆಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾದಳ ಅಧಿಕಾರಿಗಳು ಕರಾವಳಿಗೆ ಬಂದು ತಖೆ ನಡೆಸುತ್ತಿದ್ದಾರೆ ಎಂಬ ವದಂತಿ ಹರಡಿದೆ.
ಈ ನಡುವೆ ಘಟನೆ ಬಗ್ಗೆ ಪ್ರತಿಕ್ರೀಯೆ ನೀಡಿರುವ ಎಸ್ಪಿ ಲಕ್ಷ್ಮೀಪ್ರಸಾದ್, ಜಿಲ್ಲೆಯಿಂದ ಯಾವುದೇ ಕರೆ ಹೋಗಿಲ್ಲ, ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಜಿಲ್ಲೆಗೆ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಈ ನಡುವೆ ತಾಲೂಕಿನ ಧರ್ಮಗುರುಗಳೊಬ್ಬರನ್ನು ಬಂಧಿಸಲಾಗಿದೆ ಎಂಬುದಾಗಿ ವದಂತಿ ಕೂಡ ಹರಡುತ್ತಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.