ಮಹಾವೀರ ರೈಸ್ ಮತ್ತು ಆಯಿಲ್ ಮಿಲ್ಸ್-ಗೋದ್ರೆಜ್ ಆಗ್ರೋವೆಟ್ ಹೈನುಗಾರಿಕೆ ಇಂದು ಉದ್ಯಮವಾಗಿ ಬೆಳೆಯುತ್ತಿದೆ: ಡಾ|ರತ್ನಾಕರ ಮಲ್ಯ

Advt_NewsUnder_1
Advt_NewsUnder_1
Advt_NewsUnder_1

ಹೈನುಗಾರಿಕೆ ಮಾಹಿತಿ ಶಿಬಿರ

ಬೆಳ್ತಂಗಡಿ: ಮಹಾವೀರ ರೈಸ್ ಮತ್ತು ಆಯಿಲ್ ಮಿಲ್ಸ್ ಬೆಳ್ತಂಗಡಿ ಮತ್ತು ಗೋದ್ರೆಜ್ ಆಗ್ರೋವೆಟ್ ಇವರ ಜಂಟಿ ಆಶ್ರಯದಲ್ಲಿ ಹೈನುಗಾರಿಕೆ ಮಾಹಿತಿ ಶಿಬಿರ ಆ.18 ರಂದು ಸಪ್ತವರ್ಣ ಪಾರ್ಟಿ ಹಾಲ್ ಸುವರ್ಣ ಆರ್ಕೆಡ್  ಬೆಳ್ತಂಗಡಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ಪಶು ವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ ದೀಪ ಬೆಳಗಿಸಿ ಉದ್ಘಾಟಿಸಿ, ರೈತರ ಉಪಕಸುಬು ಆಗಿದ್ದ ಹೈನುಗಾರಿಕೆ ಇಂದು ಉದ್ಯಮವಾಗಿ ಬೆಳೆಯುತ್ತಿದೆ. ಹಾಲಿಗೆ ಉತ್ತಮ ಮಾರುಕಟ್ಟೆಯಿದೆ. ಗ್ರಾಮೀಣ ಪ್ರದೇಶಗಳಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘಗಳು ಆರಂಭಗೊಂಡಿದೆ. ಸರಕಾರ ಹಾಲಿಗೆ ಪ್ರೋತ್ಸಾಹಧನ ಕೊಟ್ಟು, ಹೈನುಗಾರಿಕೆಯನ್ನು ಉತ್ತೇಜಿಸುತ್ತಿದೆ. ದ.ಕ ಜಿಲ್ಲೆಯಲ್ಲಿ ಬೆಳ್ತಂಗಡಿ ತಾಲೂಕು ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಿ, ಹೈನುಗಾರಿಕೆಯಲ್ಲಿ ಕರು ಹಾಗೂ ದನಗಳ ಸಾಕಾಣಿಕೆ ಬಗ್ಗೆ ಮಾಹಿತಿ  ನೀಡಿದರು.  

ಉಜಿರೆ ಪಶು ಆಸ್ಪತ್ರೆಯ ಡಾ| ಕಾರ್ತಿಕ್ ಅವರು ಹಸುವಿಗೆ ಬರುವ ರೋಗಗಳು ಹಾಗೂ ಜೌಷಧೋಪಚಾರಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಗ್ರೋದ್ರೆಜ್ ಫೀಡ್ಸ್ ಹುಬ್ಬಳ್ಳಿಯ ತಾಂತ್ರಿಕ ಸಹಾಯಕ ಡಾ| ಸಿದ್ಧವೀರೇಶ್ ಅವರು ಪ್ರಗತಿ ಪರ ಹೈನುಗಾರಿಕೆ, ಕರು ಸಾಕಾಣಿಕೆಯಲ್ಲಿ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಮುನ್ನೆಚ್ಚರಿಕೆಗಳು, ಲಾಭದಾಯಕ ಹೈನುಗಾರಿಕೆಯಲ್ಲಿ ಪಶು ಆಹಾರದ ಬಳಕೆ ಮೊದಲಾದ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಉದ್ಯಮಿ ಭಾಸ್ಕರ ಪೈ ವೇಣೂರು ಅವರು ಮಾತನಾಡಿ ದನಗಳಿಗೆ ಫೀಡ್ ಬಳಕೆಯಲ್ಲಿ ಸರಿಯಾದ ಕ್ರಮಗಳನ್ನು ಪಾಲಿಸಬೇಕು. ಮಾರುಕಟ್ಟೆಯಲ್ಲಿ ಬೇರೆ, ಬೇರೆ ಕಂಪೆಯ ಫೀಡ್‌ಗಳಿದ್ದು, ಸರಿಯಾದ ಮಾಹಿತಿಯನ್ನು ಪಡೆದುಕೊಂಡು ಹೈನುಗಾರರು ಫೀಡ್‌ನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಗ್ರೋದ್ರೆಜ್ ಆಗ್ರೋವೆಟ್ ಕಂಪೆನಿ  ಹುಬ್ಬಳ್ಳಿಯ ಸೇಲ್ಸ್ ಮ್ಯಾನೇಜರ್ ಶದ್ಮಾನ್ ಅನ್ಸಾರಿ ಮಾತನಾಡಿ, ಗೋದ್ರೆಜ್ ಕಂಪೆನಿ  ಹೈನುಗಾರಿಕೆಗೆ ನೀಡುವ ಫೀಡ್‌ಗಳ ಗುಣಮಟ್ಚದಲ್ಲಿ ಯಾವುದೇ ರಾಜೀಯನ್ನು ಮಾಡುವುದಿಲ್ಲ. ಭಾರತದ ನಂ.1 ಕಂಪೆ ಇದಾಗಿದ್ದು, ದೇಶದಾದ್ಯಂತ 70 ಕ್ಕೂ ಹೆಚ್ಚು ಘಟಕಗಳಿಂದ ಅತ್ಯಾಧುಕ ತಂತ್ರಜ್ಞಾನದಿಂದ ಹಿಂಡಿಯ ತಯಾರಿ ನಡೆಸಲಾಗುತ್ತಿದೆ. ಹಸು ಸಾಕಾಣಿಕೆಯ ವಿವಿಧ ಹಂತದ ಫೀಡಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾತ್ತಿದೆ. ಹೈನುಗಾರರು ಬಯಸಿದ್ದಲ್ಲಿ ಕಂಪೆನಿ  ವತಿಯಿಂದ ಉಚಿತ ಜಾನುವಾರು ಚಿಕಿತ್ಸಾ ಶಿಬಿರಗಳನ್ನು ನಡೆಸಲು ಸಿದ್ಧರಿದ್ದೇವೆ. ಅಲ್ಲದೆ ಕಾರ್ಯಕ್ರಮದ ಬಾಬ್ತು 25 ಚೀಲ ಪಶು ಆಹಾರವನ್ನು ಖರೀದಿಸಿದವರಿಗೆ 25 ಗ್ರಾಂ ಸಿಲ್ವರ್ ನೀಡಲಾಗುವುದು ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಹೈನುಗಾರರ ವಿವಿಧ ಪ್ರಶ್ನೆಗಳಿಗೆ ಹಾಗೂ ಸಂಶಯಗಳಿಗೆ ವೈದ್ಯರು ಉತ್ತರಿಸಿ, ಮಾಹಿತಿ ನೀಡಿದರು. ಮಹಾವೀರ ರೈಸ್ ಮತ್ತು ಆಯಿಲ್ ಮಿಲ್‌ನ ಮಾಲಕ ಹಾಗೂ ಗ್ರೋದ್ರೆಜ್ ಫೀಡ್ಸ್ ಬೆಳ್ತಂಗಡಿ ವಿತರಕ ಪ್ರದೀಪ್ ಕುಮಾರ್ ಬಿ. ಧನ್ಯವಾದವಿತ್ತರು. ಭಾಗವಹಿಸಿದ  ಹೈನುಗಾರರಲ್ಲಿ ಲಕ್ಕೀ ಡ್ರಾ ನಡೆಸಿ ವಿಜೇತರಿಗೆ ಪಶುಆಹಾರವನ್ನು ಬಹುಮಾನವಾಗಿ ವಿತರಿಸಲಾಯಿತು. ಮಹಾವೀರ ರೈಸ್ ಮಿಲ್ಸ್‌ನ ಸಿಬ್ಬಂದಿ ವರ್ಗದವರು, ಗ್ರೋದ್ರೆಜ್‌ನ ಮಾರುಕಟ್ಟೆ ವಿಭಾಗದ ಸಿದ್ಧಪ್ಪ ಜಿ. ಸೇರಿದಂತೆ ಸಿಬಂದಿ ವರ್ಗದವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.