ಬೆಳ್ತಂಗಡಿ : ಮತ್ತೆ ಸಂಪರ್ಕ ಬೆಸೆದ  ಸೇತುವೆಗಳು

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ಹಾಗೂ ಭೂ ಕುಸಿತದಿಂದಾಗಿ ಅಪಾರ ಹಾನಿ ಸಂಭವಿಸಿ ತತ್ತರಿಸಿ ಹೋಗಿದ್ದ ಬೆಳ್ತಂಗಡಿಯ ಗ್ರಾಮಗಳು ಅತ್ಯಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಅದಕ್ಕೆ ಉದಾಹರಣೆ ಕುಕ್ಕಾವು ಸೇತುವೆ, ಹೊಸಮಠ ಸೇತುವೆ ಹಾಗೂ ಬಾಂಜಾರುಮಲೆಯ ಸ್ಟೀಲ್ ಬ್ರಿಡ್ಜ್. ತಿಂಗಳ ಕಾಲ ಸಂಪರ್ಕವಿಲ್ಲದೆ ಕೊರೆಯಬೇಕಾಗಿ ಬರಲಿದೆ ಎಂದು ಭಾವಿಸಿದ್ದ ಜನರಿಗೆ ಒಂದೇ ವಾರದಲ್ಲಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ ಬೆಳ್ತಂಗಡಿ ಮಾದರಿಯಾಗಿದೆ.  

ಕಡಿದು ಹೋಗಿದ್ದ ದಿಡುಪೆಯ ಸೇತುವೆಯನ್ನು  ಹಾಗೂ ಹೊಸಮಠ ಸೇತುವೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿ ವಾಹನ ಸಂಚಾರಕ್ಕೆ ಬಿಡಲಾಗಿದ್ದರೆ ಇಂದು ಬಾಂಜಾರು ಮಲೆಯಲ್ಲಿ ಕೊಚ್ಚಿ ಹೋಗಿದ್ದ ಸೇತುವೆಯ ಬದಲಾಗಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಿ ಕಾನನದ ನಡುವೆ ಅತಂತ್ರರಾಗಿದ್ದ ಬಾಂಜಾರು ನಿವಾಸಿಗಳಿಗೆ ಹೊಸ ಭರವಸೆಯ ಬೆಳಕನ್ನು ನೀಡಲಾಗಿದೆ.

ಬಾಂಜಾರು ಮಲೆ ಮಲೆಕುಡಿಯರ ಕಾಲೊನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಭಾರೀ ಮಳೆಗೆ ಕೊಚ್ಚಿ ಹೋಗಿತ್ತು. ಇಲ್ಲಿನ ಸುಮಾರು 40 ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಹೊರ ಪ್ರಪಂಚದೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿದ್ದರು. ಕಳೆದ ಒಂದುವಾರದಿಂದ ಈ ಜನರು ಆಹಾರಕ್ಕೂ ಪರದಾಡುವಂತಾಗಿತ್ತು. ತಾಲೂಕು ಆಡಳಿತವೇ ಇವರಿಗೆ ಆಹಾರವನ್ನು ಪೂರೈಸಿತ್ತು. ಇದೀಗ ಒಂದೇ ವಾರದಲ್ಲಿ ಬಾಂಜಾರು ಮಲೆಗೆ ವಾಕಿಂಗ್ ಸ್ಟೀಲ್ ಬ್ರಿಡ್ಜ್ ನಿರ್ಮಿಸಿ ಅವರಿಗೆ ಹೊರಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವಂತಾಗಿದೆ.

ಪರ್ಯಾಯ ರಸ್ತೆಗೆ ಡಿಸಿ ಕ್ರಮ‌ಕೈಗೊಳ್ಳಲಿ; ನಾಗೇಶ್  : ಕಳೆದ ವಾರ ಸಂಭವಿಸಿದ ಪ್ರವಾಹದಿಂದ ನಾವು ಸಂಪರ್ಕ ಕಳೆದುಕೊಂಡು ತತ್ತರಿಸಿ ಹೋಗಿದ್ದೆವು ಮತ್ತೆ ಸಂಪರ್ಕ ಪಡೆಯಲು ಎಷ್ಟು ದಿನ ಕಾಯಬೇಕು ಎಂಬ ಭಯದಲ್ಲಿದ್ದೆವು ಆದರೆ ಇದೀಗ ನಮಗೆ ಕನಿಷ್ಟ ಹೊರ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಸ್ಟೀಲ್ ಬ್ರಿಡ್ಜ್ ಅನ್ನು ನಿರ್ಮಿಸಿಕೊಡಲಾಗಿದೆ.ಬೈಕ್ ಹೋಗಲು ಅವಕಾಶವಿದೆಯೆಂದು ಹೇಳಿದ್ದು ನಮಗೆ ಹೊಸ ಜೀವ ಬಂದಂತಾಗಿದೆ. ನಮ್ಮ ಬಹುದಿನಗಳ ಬೇಡಿಕೆಯಾಗಿರುವ ಪರ್ಯಾಯ ರಸ್ತೆಯನ್ನು ಜಿಲ್ಲಾಡಳಿತ ಕೂಡಲೇ ನಿರ್ಮಿಸಿಕೊಡಬೇಕು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.