ರಾಮಚಂದ್ರಪುರ ಮಠದಿಂದ ಜಾನುವಾರುಗಳಿಗೆ ಮೇವು

ಬೆಳ್ತಂಗಡಿ : ಇತ್ತೀಚೆಗೆ ವಿನಾಶಕಾರಿಯಾಗಿ ಸುರಿದ ಭಾರಿ ಮಳೆಯಿಂದಾಗಿ ಎಲ್ಲಾ ವಿಧಗಳಲ್ಲೂ ಸಂತ್ರಸ್ತರಾದ ಬೆಳ್ತಂಗಡಿ ತಾಲೂಕಿನ ಮಲೆನಾಡಿನ ಪರಿಸರದ ರೈತರಿಗೆ ಶ್ರೀ ರಾಮಚಂದ್ರಾಪುರ ಮಠವು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಸ್ಪಂದಿಸಿದೆತನ್ನ ಗೋಪರಿವಾರ ಟ್ರಸ್ಟ್‌ನ ಸಹಯೋಗದಲ್ಲಿ ಮಂಡ್ಯದಿಂದ ಒಂದು ಲೋಡ್ ಬೈಹುಲ್ಲನ್ನು ತಂದು ಚಾರ್ಮಾಡಿಯ ತಾತ್ಕಾಲಿಕ ಗೋಶಾಲೆ, ಕುಕ್ಕಾವು ಹಾಗೂ ಕೊಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ವಿತರಿಸಿದರು. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆದ ಈ ಸೇವಾಕಾರ್ಯವನ್ನು ಉಪ್ಪಿನಂಗಡಿ ಮಂಡಲವು ಸಂಯೋಜಿಸಿತ್ತು. ವೇಣೂರು ಪರಮೇಶ್ವರ ಭಟ್,  ಮಹೇಶ ಭಟ್ ಕುದುಪುಲ, ಉದಯಶಂಕರ ಅರಸಿನಮಕ್ಕಿ ಶ್ಯಾಮ ಪ್ರಸಾದ್ ನಡ, ಶ್ರೀಕೃಷ್ಣಭಟ್ ಕಾಶಿಬೆಟ್ಟು,ಅನಂತ ಭಟ್ ಮಚ್ಚಿಮಲೆ ಮೊದಲಾದವರು ವಿತರಿಸುವಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.