ಬೆಳ್ತಂಗಡಿ : ಇತ್ತೀಚಿಗೆ ಸುರಿದ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕು ತತ್ತರಿಸಿ ಹೋಗಿದ್ದು ಜನಜೀವನ ಅಸ್ತವ್ಯಸ್ತಗೊಂಡು ಹಲವಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರಾಜ್ಯ ನೆರೆಸಂತ್ರಸ್ತರ ನಿಧಿಗೆ 25 ಕೋಟಿ ಹಾಗೂ ಬೆಳ್ತಂಗಡಿ ತಾಲೂಕಿನಪ್ರವಾಹ ಪೀಡಿತರಿಗೆ 50 ಲಕ್ಷ ರೂ. ವಿಶೇಷ ಪ್ಯಾಕೇಜಿನ ಚೆಕ್ ಅನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೆಂದ್ರ ಹೆಗ್ಗಡೆಯವರು ಶಾಸಕ ಹರೀಶ್ ಪೂಂಜ ರಿಗೆ ಹಸ್ತಾಂತರಿಸಿದರು.
ಇದುವರೆಗೆ ಧರ್ಮಸ್ಥಳದ ವತಿಯಿಂದ 19,000 ಬೆಡ್ಶೀಟ್ಗಳನ್ನು ರಾಜ್ಯದ ನೆರೆ ಸಂತ್ರಸ್ತರಿಗೆ ನೀಡಲಾಗಿದ್ದು, 4900 ಕುಟುಂಬಗಳಿಗೆ 1ಸಾವಿರ ಮೌಲ್ಯದ ನಿತ್ಯೋಪಯೋಗಿ ವಸ್ತುಗಳನ್ನು ನೀಡಲಾಗಿದೆ. ಜಾನುವಾರುಗಳಿಗೆ ತೀರ್ಥಹಳ್ಳಿ ಹಾಗೂ ಹೊಳೆನರಸೀಪುರದಿಂದ ಮೇವು ತರಿಸಿಕೊಡಲಾಗುವುದು ಎಂದು ವೀರೇಂದ್ರ ಹೆಗ್ಗಡೆಯವರು ಈ ಸಂದರ್ಭದಲ್ಲಿ ತಿಳಿಸಿದರು. ಶಾಸಕ ಹರೀಶ್ ಪೂಂಜ, ಹೇಮಾವತಿ ವಿ ಹೆಗ್ಗಡೆ, ಗ್ರಾ.ಯೋ. ಕಾರ್ಯ ನಿರ್ವಾಹಕ ನಿರ್ದೇಶಕ ಡಾ ಎಲ್ ಎಚ್ ಮಂಜುನಾಥ ಉಪಸ್ಥಿತರಿದ್ದರು.